ವಿಷ ಸೇವಿಸಿದ ಒಂದೇ ಕುಟುಂಬದ 8 ಮಂದಿ

396

ಪ್ರಜಾಸ್ತ್ರ ಸುದ್ದಿ

ಮಂಡ್ಯ: ಒಂದೇ ಕುಟುಂಬದ 8 ಮಂದಿ ವಿಷ ಸೇವಿಸಿದ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿ ನಡೆದಿದೆ. 53 ವರ್ಷದ ಶೈಲಾ ಎಂಬುವರು ಮೃತಪಟ್ಟಿದ್ದಾರೆ. 7 ಜನರು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾರಾಯಣ, ಉತ್ತರಪ್ಪ, ಜಯಮ್ಮ, ಕರಿಯಪ್ಪ, ಪ್ರೇಮಾ, ಸಿದ್ದೇಶ, ತಿಮ್ಮಪ್ಪ ಈ 7 ಜನರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಆಸ್ತಿ ಕಲಹದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!