ಅಂತಾರಾಷ್ಟ್ರೀಯ ಅಂಗಳದ ‘ಕಿಂಗ್ ಕೊಹ್ಲಿ’ಗೆ 12 ವರ್ಷ

301

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಇಂಡಿಯನ್ ಕ್ರಿಕೆಟ್ ಟೀಂ ಕ್ಯಾಪ್ಟನ್ ವಿರಾಟ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟು ಇಂದಿಗೆ 12 ವರ್ಷಗಳಾಗಿವೆ. ಆಗಸ್ಟ್ 18, 2008ರಲ್ಲಿ ಶ್ರೀಲಂಕಾ ವಿರುದ್ಧ ಡಂಬುಲಾದಲ್ಲಿ ನಡೆದ ಏಕದಿನ ಪಂದ್ಯದ ಮೂಲಕ ಕೊಹ್ಲಿ ಇಂಟರ್ ನ್ಯಾಷನಲ್ ಕ್ರಿಕೆಟ್ ಕರಿಯರ್ ಶುರುವಾಯ್ತು.

ಗಂಭೀರ ಜೊತೆ ಓಪನರ್ ಆಗಿ ಮೈದಾನಕ್ಕೆ ಬಂದ ಕೊಹ್ಲಿ 12 ರನ್ ಗಳಿಗೆ ಔಟ್ ಆಗಿದ್ದ. ಆದ್ರೆ, ಮುಂದಿನ ದಿನಗಳಲ್ಲಿ ಕೊಹ್ಲಿ ರನ್ ಮಷಿನ್ ಆಗಿ ಬದಲಾದ. 12 ವರ್ಷಗಳಲ್ಲಿ 248 ಏಕದಿನ ಪಂದ್ಯದಲ್ಲಿ 11,867 ರನ್ ಬಾರಿಸಿದ್ರೆ 86 ಟೆಸ್ಟ್ ಪಂದ್ಯಗಳಲ್ಲಿ 7,240 ರನ್, 80 ಟಿ-20 ಪಂದ್ಯಗಳಲ್ಲಿ 2,794 ರನ್ ಬಾರಿಸಿದ್ದಾನೆ.

ಇನ್ನು ಒನ್ ಡೇನಲ್ಲಿ 43, ಟೆಸ್ಟ್ ನಲ್ಲಿ 27 ಸೇರಿದಂತೆ ಒಟ್ಟು 70 ಶತಕಗಳನ್ನ ದಾಖಲಿಸಿದ್ದಾನೆ. ಇದರ ಜೊತೆಗೆ  ಒನ್ ಡೇನಲ್ಲಿ 58, ಟೆಸ್ಟ್ ನಲ್ಲಿ 22, ಟಿ-20ನಲ್ಲಿ 25 ಹಾಫ್ ಸೆಂಚ್ಯುರಿ ಬಾರಿಸಿದ್ದಾನೆ. ಟೆಸ್ಟ್ ನಲ್ಲಿ 7 ದ್ವಿಶತಕ ಸಿಡಿಸಿದ ಕೊಹ್ಲಿ ಮೊದಲ ಭಾರತೀಯ ಆಟಗಾರನಾಗಿದ್ದಾನೆ. ಹೀಗೆ ಕೊಹ್ಲಿ ದಾಖಲೆಗಳ ಸರಮಾಲೆಯನ್ನ ತನ್ನ ಕೊರಳಿಗೆ ಹಾಕಿಕೊಂಡ ಕಿಂಗ್ ಕೊಹ್ಲಿಗೆ ಬಿಸಿಸಿಐ ಅಭಿನಂದನೆ ಸಲ್ಲಿಸಿದೆ.




Leave a Reply

Your email address will not be published. Required fields are marked *

error: Content is protected !!