ಕಿರಿಕ್ ಪಾರ್ಟಿ ಚಿತ್ರದ ನಾಲ್ವರಿಗೆ ವಾರೆಂಟ್ ಜಾರಿ

254

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಿರ್ದೇಶಕ ರಿಷಬ್ ಶೆಟ್ಟಿ ಆಕ್ಷನ್ ಕಟ್ ಹೇಳಿದ ಕಿರಿಕ್ ಪಾರ್ಟಿ ಚಿತ್ರ ತಂಡದ ನಾಲ್ವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ. 2016ರಲ್ಲಿ ಬಿಡುಗಡೆಯಾದ ಚಿತ್ರದಲ್ಲಿ ಬಳಕೆಯಾದ ಹಾಡೊಂದರ ವಿರುದ್ಧ ಲಹರಿ ರೆಕಾರ್ಡಿಂಗ್ಸ್ ಕ್ರಿಮಿನಲ್ ಹಾಗೂ ಸಿವಿಲ್ ಕೇಸ್ ಹಾಕಿತ್ತು.

ಕಾಪಿ ರೈಟ್ಸ್ ಆಕ್ಟ್ ಸೆಕ್ಷನ್ 63ಎ ಹಾಗೂ 63ಬಿ ಅಡಿಯಲ್ಲಿ 2019ರಲ್ಲಿ ಕೇಸ್ ದಾಖಲಾಗಿತ್ತು. ಈ ಸಂಬಂಧ 8 ಬಾರಿ ಕೋರ್ಟ್ ನೋಟಿಸ್ ನೀಡಿದ್ರೂ ಹಾಜರಾಗದ ಹಿನ್ನೆಲೆಯಲ್ಲಿ ನಿರ್ದೇಶಕ ರಿಷಬ್ ಶೆಟ್ಟಿ, ನಟ ರಕ್ಷಿತ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ ಲೋಕನಾಥ ಹಾಗೂ ಪರಮ್ವಾ ಸ್ಟೋಡಿಯೋಸ್ ವಿರುದ್ಧ ಕೇಸ್ ದಾಖಲಾಗಿದೆ.

ಇದೀಗ 9ನೇ ಎಸಿಎಂಎಂ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಹೀಗಾಗಿ ಈ ನಾಲ್ವರು ಮೇ 27ರಂದು ಕೋರ್ಟ್ ಗೆ ಹಾಜರಾಗಲೇಬೇಕಿದೆ.




Leave a Reply

Your email address will not be published. Required fields are marked *

error: Content is protected !!