ಒಂದೇ ಮುಹೂರ್ತದಲ್ಲಿ ಇಬ್ಬರಿಗೆ ತಾಳಿ ಕಟ್ಟಿದವನ ಕಹಾನಿ…

471

ಪ್ರಜಾಸ್ತ್ರ ಸುದ್ದಿ

ಭೋಪಾಲ್: ಈ ಸುದ್ದಿ ಓದುವ ಹುಡ್ಗರು, ಇವನದಪ್ಪ ಅದೃಷ್ಟ ಅಂತಾರೆ. ಹುಡ್ಗೀಯರು ಮುಸಿಮುಸಿ ನಗ್ತಾರೆ. ಆದ್ರೂ, ಇದು ಸತ್ಯ. ಒಂದೇ ಮಂಟಪ, ಒಂದೇ ಮುಹೂರ್ತದಲ್ಲಿ ಇಬ್ಬರಿಗೆ ತಾಳಿ ಕಟ್ಟುವ ಮೂಲಕ ಇಬ್ಬರ ಹೆಂಡಿರ ಮುದ್ದಿನ ಗಂಡ ಆಗಿದ್ದಾನೆ.

ಮಧ್ಯಪ್ರದೇಶದ ಘೋಡಡೋಂಗ್ರಿ ಅನ್ನೋ ಗ್ರಾಮದಲ್ಲಿ ನಡೆದ ಮದುವೆಯಲ್ಲಿ ಈ ವಿಶೇಷತೆ ಸಾಕ್ಷಿಯಾಗಿದೆ. ಬುಡಕಟ್ಟು ಜನಾಂಗದ ಯುವಕ ಭೋಪಾಲನಲ್ಲಿ ಓದುವಾಗ ಯುವತಿಯೊಬ್ಬಳ್ಳನ್ನ ಪ್ರೀತಿಸ್ತಿದ್ದ. ಇತ್ತ ಕುಟುಂಬಸ್ಥರು ತಾವು ನೋಡಿದ ಹುಡ್ಗಿಯನ್ನ ಮದ್ವೆಯಾಗಬೇಕು ಎಂದು ಹಠ ಹಿಡಿದಿದ್ರು.

ಇತ್ತ ಲವರ್, ಅತ್ತ ಸಂಬಂಧಿಕರ ಹುಡ್ಗಿ ಮದ್ವೆಯ ವಿಚಾರ ಊರಿನ ಮುಖಂಡರ ಪಂಚಾಯ್ತಿಗೆ ಬಂದಿದೆ. ಆಗ ಚರ್ಚೆ ನಡೆದಿದೆ. ಹುಡ್ಗನ ಅದೃಷ್ಟವೋ ಏನೋ ಇಬ್ಬರು ಹುಡ್ಗೀಯರು ಒಬ್ಬನನ್ನೇ ಮದುವೆಯಾಗಲು ಒಪ್ಪಿಕೊಂಡಿದ್ದಾರೆ. ಹೀಗಾಗಿ ಎರೆಡೆರಡು ಲಡ್ಡು ಬಂದು ಬಾಯಿಗೆ ಬಿತ್ತು ಎಂದು, ಇಬ್ಬರಿಗೆ ತಾಳಿ ಕಟ್ಟಿದ್ದಾನೆ.

ಇತ್ತ ಇಬ್ಬರನ್ನ ಮದ್ವೆಯ ಖುಷಿಯಲ್ಲಿ ಅಪಾರ ಸಂಖ್ಯೆ ಬಂಧು ಬಳಗ ಸೇರಿಸಿದ್ದಾನೆ. ಕೋವಿಡ್ 19 ಭೀತಿಯಿರುವಾಗ, ಮದುವೆಗೆ ಅನುಮತಿ ಪಡೆದಿಲ್ಲವೆಂದು ತಹಶೀಲ್ದಾರ್ ವರನ ಮೇಲೆ ಪ್ರಕರಣ ದಾಖಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!