ದೇಶದ ಮೊದಲ ವಿಶ್ವದರ್ಜೆ ರೈಲು ನಿಲ್ದಾಣ ಉದ್ಘಾಟನೆಗೆ ಸಿದ್ಧ

673

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ದೇಶದ ಮೊದಲ ವಿಶ್ವದರ್ಜೆಯ ರೈಲು ನಿಲ್ದಾಣ ನಿರ್ಮಿಸಲಾಗಿದೆ. ಭೋಪಾಲ್ ನ ಹಬೀಬ್ ಗಂಜ್ ರೈಲು ನಿಲ್ದಾಣ ದೇಶದ ಮೊದಲ ವಿಶ್ವದರ್ಜೆಯ ರೈಲು ನಿಲ್ದಾಣವಾಗಿದೆ. ವಿಮಾನ ನಿಲ್ದಾಣದಲ್ಲಿರುವ ಸೌಲಭ್ಯಗಳೆಲ್ಲವೂ ಇಲ್ಲಿದೆ.

ಈ ಅತ್ಯಾಧುನಿಕ ರೈಲು ನಿಲ್ದಾಣವನ್ನು ನವೆಂಬರ್ 15ರಂದು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಬನ್ಸಾಲ್ ಗ್ರೂಪ್ ಅನ್ನೋ ಕಂಪನಿ ಈ ನಿಲ್ದಾಣವನ್ನು 450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದೆ. 700-1,100 ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದ್ವಾರಗಳನ್ನು, ಲಿಫ್ಟ್, ಎಸ್ಕಿಲೇಟರ್ ಗಳನ್ನು ನಿರ್ಮಿಸಲಾಗಿದೆ.

ಈ ರೈಲು ನಿಲ್ದಾಣದಲ್ಲಿ ಫುಡ್ ಕೋರ್ಟ್, ರೆಸ್ಟೋರೆಂಟ್, ಎಸಿ ಅಳವಡಿಸಿರುವ ವೇಟಿಂಗ್ ರೂಮ್, ವಿಐಪಿ ಲಾಂಜ್ ಸಹ ನಿರ್ಮಿಸಲಾಗಿದೆ. 160 ಸಿಸಿ ಕ್ಯಾಮೆರಾಗಳು ಸದಾ ಕೆಲಸ ನಿರ್ವಹಿಸಲಿವೆ. ಇದು ದೇಶದ ಮೊದಲ ಖಾಸಗಿ ಸಹಭಾಗಿತ್ವದ ರೈಲ್ವೆ ನಿಲ್ದಾಣವಾಗಿದೆ. 8 ವರ್ಷಗಳ ಕಾಲ ನಿರ್ವಹಣೆ ಜವಾಬ್ದಾರಿಯ ಜೊತೆಗೆ 45 ವರ್ಷಗಳ ಕಾಲ ಇದನ್ನು ಬನ್ಸಾಲ್ ಗ್ರೂಪ್ ಲೀಸ್ ಗೆ ಪಡೆಯಲಾಗಿದೆ.




Leave a Reply

Your email address will not be published. Required fields are marked *

error: Content is protected !!