ಹಾಡಹಗಲೇ ಕಾಫಿನಾಡಿನಲ್ಲಿ ಫೈರಿಂಗ್

349

ಪ್ರಜಾಸ್ತ್ರ ಅಪರಾಧ ಸುದ್ದಿ

ಚಿಕ್ಕಮಗಳೂರು: ಹಾಡಹಗಲೇ ದರೋಡೆಗೆ ಯತ್ನಿಸಿದ ಟೀಂವೊಂದು ಫೈರಿಂಗ್ ನಡೆಸಿದ ಘಟನೆ ನಗರದಲ್ಲಿ ನಡೆದಿದೆ. ಎಂ.ಜಿ ರಸ್ತೆಯಲ್ಲಿರುವ ಕೇಸರಿ ಜ್ಯುವೆಲರ್ಸ್ ಅಂಗಡಿಗೆ ನುಗ್ಗಿದ ದರೋಡೆಕೋರರು, ಮೂರು ಸುತ್ತು ಗುಂಡು ಹಾರಿಸಿ ಎಸ್ಕೇಪ್ ಆಗಿದ್ದಾರೆ.

ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಅಂಗಡಿ ಮಾಲೀಕನಿಗೆ ಗ್ಲಾಸು ತಗುಲಿ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಎಸ್ಪಿ ಅಕ್ಷಯ ಎಂ. ಹಾಕೆ ಪ್ರತಿಕ್ರಿಯೆ ನೀಡಿದ್ದು, ಪಲ್ಸರ್ ಬೈಕ್ ನಲ್ಲಿ ಬಂದ ಮೂವರಲ್ಲಿ ಒಬ್ಬ ಹೆಲ್ಮೆಟ್ ಹಾಕಿದ್ದ. ಇಬ್ಬರು ಮಾಸ್ಕ್ ಧರಿಸಿದ್ರು ಎಂದು ಅಂಗಡಿ ಮಾಲೀಕರು ಮಾತ್ನಾಡಿದ್ದಾರೆ ಎಂದಿದ್ದಾರೆ.

ಸಿಸಿಟಿವಿ ದೃಶ್ಯಗಳನ್ನ ಪರಿಶೀಲನೆ ನಡೆಸಿದ್ದು, ದರೋಡೆಕೋರರ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ. ಅವರ ಪತ್ತೆಯ ಕಾರ್ಯ ನಡೆಸಲಾಗಿದೆ ಎಂದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!