ಬ್ರೇಕಿಂಗ್ ನ್ಯೂಸ್
Search

8.5 ಕೋಟಿ ಕದ್ದು ಸಿಕ್ಕಿಬಿದ್ದವರ ಕಥೆ..

221

ಪ್ರಜಾಸ್ತ್ರ ಅಪರಾಧ ಸುದ್ದಿ

ಪಂಜಾಬ್: ಆ ಕಿಲಾಡಿ ದಂಪತಿ 8.5 ಕೋಟಿ ರೂಪಾಯಿ ದರೋಡೆಯ ಮಾಸ್ಟರ್ ಮೈಂಡ್. 12 ಜನರ ಟೀಂವೊಂದು ಕ್ಯಾಶ್ ಮ್ಯಾನೆಜ್ಮೆಂಟ್ ಕಂಪನಿ ಮೇಲೆ ಜೂನ್ 10ರಂದು ದಾಳಿ ಮಾಡಿ ಬರೋಬ್ಬರಿ 8.5 ಕೋಟಿ ರೂಪಾಯಿ ದರೋಡೆ ಮಾಡಿ ಎಸ್ಕೇಪ್ ಆಗಿದೆ. ಜೊತೆಗೆ ಇಲ್ಲಿನ ಸಿಸಿಟಿವಿ ಡಿವಿಆರ್ ಸಮೇತ ಕಂಪನಿ ಗಾಡಿಯೊಂದಿಗೆ ಪರಾರಿಯಾಗಿದೆ.

ಈ ಕುರಿತು ತನಿಖೆ ನಡೆಸಿದ ಪೊಲೀಸರು ಕಂಪನಿಯ ಸಿಬ್ಬಂದಿ ವಿಚಾರಣೆ ನಡೆಸಿದ್ದಾರೆ. ಇದರಲ್ಲಿ ಮಂಜಿಂದರ್ ಸಿಂಗ್ ಮಣಿ ಎಂಬಾತನ ವಿಚಾರಣೆ ನಡೆಸಿದಾಗ ಆತ ಕೃತ್ಯದ ಕುರಿತು ಬಾಯಿ ಬಿಟ್ಟಿದ್ದಾನೆ. ಮಂದೀಪ್ ಕೌರ್ ಅನ್ನೋ ಮಹಿಳೆಯ ಈ ದರೋಡೆಯ ಮಾಸ್ಟರ್ ಮೈಂಡ್ ಎಂದಿದ್ದಾನೆ.

ಉಚಿತ ಜ್ಯೂಸ್ ಕುಡಿಯಲು ಬಂದು ಸಿಕ್ಕಿಬಿದ್ದ ದಂಪತಿ.

ತನಿಖೆ ಚುರುಕುಗೊಳಿಸಿದ ಪೊಲೀಸರು ಮನದೀಪ್ ಸಿಂಗ್ ವಿಕ್ಕಿ, ಹರ್ಮಿಂದರ್ ಸಿಂಗ್ ಲಂಬು, ಪರಮಜೀತ್ ಸಿಂಗ್ ಪಮ್ಮಾ, ಹರ್ ಪ್ರೀತ್ ಸಿಂಗ್, ನರೀಂದರ್ ಸಿಂಗ್ ಸಂತೊಷ್ ಎಂಬುವರನ್ನು ಬಂಧಿಸಿದ್ದಾರೆ. ಆದರೆ, ದರೋಡೆಯ ಲೀಡರ್ ಮಂದಂಈಪ್ ಕೌರ್ ಸಿಕ್ಕಿಲ್ಲ. ಆಗ ಪೊಲೀಸರು ಡಾಕು ಹಸೀನಾ ಅನ್ನೋ ಹೆಸರನ್ನು ಆಕೆಗೆ ಇಟ್ಟಿದ್ದಾರೆ. ಲೆಟ್ಸ್ ಕ್ಯಾಚ್ ದಿ ಕ್ವೀನ್ ಬೀ ಎಂದು ಕಾರ್ಯಾಚರಣೆ ನಡೆಸಿದ್ದಾರೆ. ಆಗ ಮಂದೀಪ್ ಕೌರ್ ಹಾಗೂ ಆಕೆ ಪತಿ ಜಸ್ವಿಂದರ್ ಉತ್ತರಾಖಂಡದ ಚಮೋಲಿ ಹೇಮಕುಂಡ್ ಸಾಹೀಬ್ ನಲ್ಲಿರುವ ಪವಿತ್ರ ಸಿಖ್ ದೇವಾಲಯಕ್ಕೆ ಹೋಗಿರುವುದು ತಿಳಿದಿದೆ.

ದರೋಡೆ ಮಾಡಿದ ಹಣ ವಶಪಡಿಸಿಕೊಂಡ ಪೊಲೀಸರು.

ಧಾರ್ಮಿಕ ಕ್ಷೇತ್ರಗಳಲ್ಲಿ ಅಪಾರ ಸಂಖ್ಯೆಯ ಭಕ್ತರು ಇರುತ್ತಾರೆ. ಇವರನ್ನು ಪತ್ತೆ ಹಚ್ಚುವುದು ಕಷ್ಟವೆಂದು ತಿಳಿದು, ಉಚಿತ ತಂಪು ಪಾನೀಯ ನೀಡುವ ಪ್ಲಾನ್ ಮಾಡಿ, ಅದರಂತೆ ಜ್ಯೂಸ್ ಕೊಡುತ್ತಾ ಪೊಲೀಸರು ಇವರಿಗೆ ಬಲೆ ಬೀಸಿದ್ದಾರೆ. ಪೊಲೀಸರ ಪ್ಲಾನ್ ವರ್ಕೌಟ್ ಆಗಿದೆ. ಉಚಿತ ಜ್ಯೂಸ್ ಕುಡಿಯಲು ಬಂದ ಜೋಡಿ ಮುಖಕ್ಕೆ ಬಟ್ಟೆ ಹಾಕಿಕೊಂಡು ಬಂದಿತ್ತು. ಜ್ಯೂಸ್ ಕುಡಿಯುವಾಗ ಮುಖದ ಮೇಲಿನ ಬಟ್ಟೆ ತೆಗೆದಿದೆ. ಆಗ ಪೊಲೀಸರು ಅಲರ್ಟ್ ಆಗಿದ್ದಾರೆ. ಮೊದಲು ಅವರು ದೇವರ ದರ್ಶನ ಮಾಡಿಕೊಂಡು ಬರಲು ಬಿಟ್ಟಿದ್ದಾರೆ. ನಂತರ ಅವರನ್ನು ಚೇಸ್ ಮಾಡಿ ಬಂಧಿಸಿದ್ದಾರೆ. ಈ ಜೋಡಿಯಿಂದ 21 ಲಕ್ಷ ರೂಪಾಯಿ ವಶಕ್ಕೆ ಪಡೆಯಲಾಗಿದೆ. ಮೊದಲೇ ಬಂಧಿತರಿಂದ ಉಳಿದ ಹಣ ಪಡೆಯಲಾಗಿತ್ತು.

ದರೋಡ್ ಪ್ಲಾನ್ ಸಕ್ಸಸ್ ಆಗಿದ್ದಕ್ಕೆ ಧಾರ್ಮಿಕ ಕ್ಷೇತ್ರಗಳ ಭೇಟಿ ನಡೆಸಿದ್ದರು. ನಂತರ ನೇಪಾಳಕ್ಕೆ ಹಾರುವ ಪ್ಲಾನ್ ಮಾಡಿದ್ದರು. ವಿಮಾ ಏಜೆಂಟ್, ವಕೀಲರ ಬಳಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಮಂದೀಪ್ ಳಿಗೆ ಸಾಲವಿತ್ತು. ಫೆಬ್ರವರಿಯಲ್ಲಷ್ಟೇ ಮದುವೆಯಾಗಿದ್ದಳು. ಶ್ರೀಮಂತೆಯಾಗುವ ಆಸೆಯಲ್ಲಿ ಮಾಡಬಾರದ ಕೆಲಸ ಮಾಡಿ ಕಂಬಿ ಹಿಂದೆ ಸೇರಿದ್ದಾಳೆ. 12 ಮಂದಿಯಲ್ಲಿ 9 ಜನರ ಬಂಧನವಾಗಿದ್ದು, ಉಳಿದ ಮೂವರ ಬಂಧನದ ಕಾರ್ಯಾಚರಣೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!