ಬ್ರಿಟನ್ ರಾಣಿ 2ನೇ ಎಲಿಜಬೆತ್ ಪತಿ ನಿಧನ

451

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಲಂಡನ್: ಬ್ರಿಟನ್ ರಾಣಿ 2ನೇ ಎಲಿಜಬೆತ್ ಪತಿ ಪ್ರಿನ್ಸ್ ಫಿಲಿಪ್ ಶುಕ್ರವಾರ ನಿಧನರಾಗಿದ್ದಾರೆ. 99 ವರ್ಷದ ಫಿಲಿಪ್ ನಿಧನದ ಸುದ್ದಿಯನ್ನ ದಿ ರಾಯಲ್ ಫ್ಯಾಮಿಲಿ ಟ್ವಿಟರ್ ಅಕೌಂಟ್ ಮೂಲಕ ಸ್ಪಷ್ಟಪಡಿಸಲಾಗಿದೆ.

ದ್ ಡ್ಯೂಕ್ ಆಫ್ ಎಡಿನ್ ಬರ್ಗ್ ಪ್ರಿನ್ಸ್ ಫಿಲಿಪ್, ವಿಂಡರ್ಸ್ ಕ್ಯಾಸಲ್ ನಲ್ಲಿ ನಿಧನರಾಗಿದ್ದಾರೆ ಎಂದು ತಿಳಿಸಲಾಗಿದೆ. ಪತಿ ನಿಧನಕ್ಕೆ ಪತ್ನಿ 2ನೇ ಎಲಿಜಬೆತ್ ಸಂತಾಪ ಸೂಚಿಸಿದ್ದಾರೆ. ಕಳೆದ ನವೆಂಬರ್ ತಿಂಗಳಲ್ಲಿ ಈ ದಂಪತಿ ತಮ್ಮ 73ನೇ ವಿವಾಹ ವಾರ್ಷಿಕೋತ್ಸ ಆಚರಿಸಿಕೊಂಡಿತ್ತು.

ಪ್ರಿನ್ಸ್ ಫಿಲಿಪ್ ಫೆಬ್ರವರಿ 16ರಂದು ಹೃದಯ ಸಂಬಂಧಿ ಹಾಗೂ ಸೋಂಕು ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಡಿಸ್ಚಾರ್ಜ್ ಮಾಡಲಾಗಿತ್ತು. ಶುಕ್ರವಾರ 99ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!