ಮೋದಿಗೆ ನೀಡಿದ ಕೋದಂಡರಾಮನ ಮೂರ್ತಿ ರೂವಾರಿ ಈ ಕನ್ನಡಿಗ

317

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇಂದು ಮಧ್ಯಾಹ್ನ ಅಯೋಧ್ಯೆಯಲ್ಲಿ ನಡೆದ ರಾಮ ಮಂದಿರ ಭೂಮಿಪೂಜೆ ಕಾರ್ಯಕ್ರಮದಲ್ಲಿ, ಪ್ರಧಾನಿ ಮೋದಿಗೆ ಕೋದಂಡರಾಮನ ವಿಗ್ರಹವನ್ನ ಉಡುಗರೆಯಾಗಿ ನೀಡಲಾಯ್ತು. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಪ್ರಧಾನಿಗೆ ಈ ಉಡುಗರೆ ನೀಡಿದ್ರು. ಈ ಮೂರ್ತಿಯ ರೂವಾರಿ ಕನ್ನಡಿಗ.

ಬೆಂಗಳೂರು ಮೂಲದ ಶಿಲ್ಪಿ ಪಿ.ರಾಮಮೂರ್ತಿ ಎಂಬುವವರು ಈ ಮೂರ್ತಿಯನ್ನ ತಯಾರು ಮಾಡಿದ್ದು. ಉತ್ತರ ಪ್ರದೇಶ ಸರ್ಕಾರದಿಂದ ಮನವಿ ಬಂದ ಹಿನ್ನೆಲೆಯಲ್ಲಿ ಪಿ.ರಾಮಮೂರ್ತಿ ಅವರು ಈ ವಿಗ್ರಹ ಕೆತ್ತನೆ ಮಾಡಿದ್ದಾರೆ. 3 ಅಡಿ ಎತ್ತರದ ವಿಗ್ರಹವನ್ನ ಟೀಕ್ ವುಡ್ ನಿಂದ ನಿರ್ಮಿಸಲಾಗಿದೆ. ಇದಕ್ಕಾಗಿ ಮೂರು ತಿಂಗಳು ಸಮಯವನ್ನ ತೆಗೆದುಕೊಂಡಿದ್ದಾರೆ. ಜುಲೈ 1ರಂದು ಉತ್ತರ ಪ್ರದೇಶ ಸರ್ಕಾರದ ಕೈಸೇರಿತ್ತು. ಇಂದು ಮೋದಿಗೆ ಉಡುಗರೆಯಾಗಿ ನೀಡಲಾಯ್ತು.

ಶಿಲ್ಪಿ ಪಿ.ರಾಮಮೂರ್ತಿ ಅವರು ಈ ಹಿಂದೆ 7.5 ಅಡಿ ಎತ್ತರದ ಕೋದಂಡರಾಮನ ವಿಗ್ರಹ ತಯಾರಿಸಿದ್ರು. ಇದಕ್ಕಾಗಿ 2016ರಲ್ಲಿ ಇವರಿಗೆ ರಾಷ್ಟ್ರ ಪ್ರಶಸ್ತಿ ಬಂದಿದೆ. ಈ ಮೇಲಿನ ಫೋಟೋದಲ್ಲಿ ವಿಗ್ರಹ 7.5 ಅಡಿ ಎತ್ತರದಾಗಿದೆ.




Leave a Reply

Your email address will not be published. Required fields are marked *

error: Content is protected !!