ಕರ್ನಾಟಕ ಸೇರಿ 4 ರಾಜ್ಯಗಳು ಅಪಾಯದಲ್ಲಿ!

453

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕಳೆದ ಬಾರಿ ಸಂಭವಿಸಿದ ಪ್ರವಾಹದ ಪರಿಸ್ಥಿತಿಯಿಂದ ಇನ್ನೂ ಜನರು ಸುಧಾರಿಸಿಕೊಳ್ಳಲು ಆಗ್ತಿಲ್ಲ. ಇದರ ನಡುವೆ ಇದೀಗ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಕರ್ನಾಟಕ ಸೇರಿ 4 ರಾಜ್ಯಗಳಿಗೆ ಎಚ್ಚರಿಕೆ ನೀಡಲಾಗಿದೆ. ಆಸ್ಸಾಂ ಈಗಾಗ್ಲೇ ಪ್ರವಾಹದಿಂದ ತತ್ತರಿಸಿ ಹೋಗಿದೆ.

ಗುಜರಾತ್, ಗೋವಾ, ಮಧ್ಯ ಮಹಾರಾಷ್ಟ್ರ ಹಾಗೂ ಕರಾವಳಿ ಕರ್ನಾಟಕ ಭಾಗದ ಕೆಲ ಪ್ರದೇಶಗಳಲ್ಲಿ ಪ್ರವಾಹ ಉಂಟಾಗುವ ಎಚ್ಚರಿಕೆಯನ್ನ ಇಂದು ನೀಡಲಾಗಿದೆ. ನಿರಂತರ ಮಳೆಯಿಂದಾಗಿ ಉಂಟಾಗುವ ಪರಿಸ್ಥಿತಿಯಿಂದ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಲು ತಿಳಿಸಲಾಗಿದೆ.

ಇನ್ನು ಸಾಂಗ್ಲಿಯ ನದಿಯ ದಂಡೆಯಲ್ಲಿರುವ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಹೆಚ್ಚಿನ ಮಾಹಿತಿಗಾಗಿ 0233-2301820 ಅಥವ 2302925 ನಂಬರ್ ಗೆ ಫೋನ್ ಮಾಡಲು ತಿಳಿಸಿದೆ. ಇದೆ ರೀತಿ ಕೊಲ್ಹಾಪುರದಲ್ಲಿರುವ ಜನರಿಗೂ ಎಚ್ಚರಿಕೆ ನೀಡಲಾಗಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ. ರಾಜಾರಾಮ ಆಣೆಕಟ್ಟೆಯ ಮಟ್ಟ ಶೀಘ್ರದಲ್ಲಿ ಅಪಾಯದ ಮಟ್ಟ ಮೀರಲಿದೆ ಎಂದು ತಿಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!