ಕೊಹ್ಲಿ ನಂಬರ್ 1.. ರೋಹಿತ ನಂಬರ್ 2

722

ಪ್ರಜಾಸ್ತ್ರ ಕೀಡಾ ಸುದ್ದಿ

ಐಸಿಸಿ ಏಕದಿನ ಕ್ರಿಕೆಟ್ ರ್ಯಾಂಕಿಂಗ್ ಇಂದು ಪ್ರಕಟಿಸಿದೆ. ಇದರಲ್ಲಿ ಇಂಡಿಯನ್ ಕ್ರಿಕೆಟ್ ಟೀಂ ಕ್ಯಾಪ್ಟನ್ ವಿರಾಟ ಕೊಹ್ಲಿ ನಂಬರ್ 1 ಹಾಗೂ ಓಪನರ್ ರೋಹಿತ ಶರ್ಮಾ ನಂಬರ್ 2 ಸ್ಥಾನವನ್ನ ಕಾಯ್ದುಕೊಂಡಿದ್ದಾರೆ.

ಕೊಹ್ಲಿ 871 ಅಂಕಗಳೊಂದಿಗೆ 1ನೇ ಸ್ಥಾನ, 855 ಅಂಕಗಳೊಂದಿಗೆ ಶರ್ಮಾ 2ನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನ ಬಾಬರ್ ಅಜಮ್ 829 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ. ಜಾನಿ ಬೇರ್ ಸ್ಟೋ 13ನೇ ಸ್ಥಾನ, ಇಂಗ್ಲೆಂಡ್ ನಾಯಕ ಮಾರ್ಗನ್ 22ನೇ ಸ್ಥಾನದಲ್ಲಿದ್ದಾರೆ.

ಬೌಲಿಂಗ್ ನಲ್ಲಿ ನ್ಯೂಜಿಲೆಂಡ್ ನ ಟ್ರೆಂಟ್ ಬೌಲ್ಟ್ ನಂಬರ್ 1 ಇದ್ದು ಭಾರತದ ವೇಗಿ ಜಸ್ಪ್ರಿತ್ ಬುಮ್ರಾ 2ನೇ ಸ್ಥಾನದಲ್ಲಿದ್ದಾರೆ. ಇದು ಇಂದು ಬಿಡುಗಡೆಗೊಂಡ ರ್ಯಾಂಕಿಂಗ್ ಪಟ್ಟಿಯಾಗಿದೆ.




Leave a Reply

Your email address will not be published. Required fields are marked *

error: Content is protected !!