5 ಸಾವಿರಕ್ಕೂ ಅಧಿಕ ಸೋಂಕಿತರು.. 100 ಜನರ ಸಾವು

346

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 5,619 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ 1,51,449ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇದರಲ್ಲಿ ಇಂದು 5,407 ಜನ ಡಿಸ್ಚಾರ್ಜ್ ಆಗಿದ್ದು, 74,679 ಜನರು ಗುಣಮುಖರಾಗಿದ್ದಾರೆ. 73,948 ಪ್ರಕರಣಗಳು ಸಕ್ರಿಯವಾಗಿವೆ.

ಇನ್ನು ಕಳೆದ 24 ಗಂಟೆಯಲ್ಲಿ 100 ಜನರು ಸಾವನ್ನಪ್ಪಿದ್ದು, 2,804ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಶೇಕಡ 1.85ರಷ್ಟು ಪ್ರಮಾಣವಿದೆ. ಇನ್ನು ಚೇತರಿಕೆ ಪ್ರಮಾಣ ಶೇಕಡ 49.32ರಷ್ಟಿದೆ. ಜಿಲ್ಲಾವಾರು ಸೋಂಕಿತರ ವಿವರ ಈ ರೀತಿಯಾಗಿದೆ..

ಬೆಂ.ನ 1,848, ಬಳ್ಳಾರಿ 631, ಬೆಳಗಾವಿ 293, ಮೈಸೂರು 261, ದಾವಣಗೆರೆ 224, ಧಾರವಾಡ 199, ಕಲಬುರಗಿ 197, ಉಡುಪಿ 173, ಕೊಪ್ಪಳ 154, ದ.ಕ 149 ಬಾಗಲಕೋಟೆ 149, ಹಾಸನ 137, ಚಿಕ್ಕಬಳ್ಳಾಪುರ 129, ಉ.ಕ 125, ಮಂಡ್ಯ 123, ಬೆಂ.ಗ್ರಾ 110, ರಾಯಚೂರು 91, ಗದಗ 78, ಯಾದಗಿರಿ 76, ಹಾವೇರಿ 71, ವಿಜಯಪುರ 66, ಬೀದರ 52, ಕೋಲಾರ 48, ಚಿಕ್ಕಮಗಳೂರು 48, ರಾಮನಗರ 45, ಚಾಮರಾಜನಗರ 38, ಶಿವಮೊಗ್ಗ 35, ತುಮಕೂರು 34, ಚಿತ್ರದುರ್ಗ 24, ಕೊಡಗು 13 ಪ್ರಕರಣಗಳು ಕಾಣಿಸಿಕೊಂಡಿವೆ.




Leave a Reply

Your email address will not be published. Required fields are marked *

error: Content is protected !!