ನಟ ಚೇತನ-ಮೇಘಾ ಸರಳ ವಿವಾಹ

396

ಸ್ಯಾಂಡಲ್ ವುಡ್ ಅಂಗಳದ ನಟ ಚೇತನ ಅತ್ಯಂತ ಸರಳವಾಗಿ ವಿವಾಹ ಮಾಡಿಕೊಂಡಿದ್ದಾರೆ. 2 ವರ್ಷಗಳಿಂದ ಪ್ರೀತಿಸ್ತಿದ್ದ ಹುಡ್ಗಿ ಮೇಘಾ ಜೊತೆ ಸಬ್ ರಿಜಿಸ್ಟಾರ್ ಆಫೀಸ್ ನಲ್ಲಿ ಕಾನೂನಾತ್ಮಕ ವಿವಾಹ ಮಾಡಿಕೊಳ್ಳುವ ಮೂಲಕ ತುಂಬಾ ಸಿಂಪಲ್ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬೆಂಗಳೂರಿನ ಗಾಂಧಿನಗರದ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಚೇತನ ಹಾಗೂ ಮೇಘಾ ವಿವಾಹ ಒಪ್ಪಂದಕ್ಕೆ ಸಹಿ ಮಾಡಿದ್ರು. ಬಳಿಕ ಸಂವಿಧಾನ ಓದುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟರು. ನಾಳೆ ಸಂಜೆ ವಲ್ಲಬ್ ನಿಕೇತನ ವಿನೋಬಾ ಭಾವೆ ಆಶ್ರಮದಲ್ಲಿ ಮಕ್ಕಳು ಹಾಗೂ ಹಿರಿಯ ಜೀವಗಳ ಎದುರು ವಿಶಿಷ್ಟವಾಗಿ ಒಂದಿಷ್ಟು ಸಂಪ್ರದಾಯದ ಕಾರ್ಯ್ರಕದಮ ಮೂಲಕ ಮತ್ತೊಮ್ಮೆ ಹೊಸ ಜೀವನಕ್ಕೆ ಮುನ್ನುಡಿ ಬರೆಯಲಿದ್ದಾರೆ.

ಈ ಹಿಂದೆ ಹೇಳಿದ್ದಂತೆ ನಾಳೆ ವಚನ, ಸೂಫಿ ಗಾಯಾನ, ಸಿದ್ದಿ, ಲಂಬಾಣಿ, ಕೊರಗ ನೃತ್ಯ ನಡೆಯಲಿದೆ. ಇದೇ ವೇಳೆ ಪುಸ್ತಕ ಪ್ರದರ್ಶನ ಸಹ ಆಯೋಜಿಸಲಾಗಿದೆ. ಈ ಮೂಲಕ ಯಾವುದೇ ಆಡಂಬರವಿಲ್ಲದೆ ನಟ ಚೇತನ ಸರಳವಾಗಿ ಸಂಸಾರಿಕ ಬದುಕಿಗೆ ಕಾಲಿಟ್ಟಿದ್ದಾರೆ.




Leave a Reply

Your email address will not be published. Required fields are marked *

error: Content is protected !!