ಬಜೆಟ್ ಬಗ್ಗೆ ರಾಜ್ಯ-ಕೇಂದ್ರ ನಾಯಕರು ಏನಂದ್ರು?

422

ಬೆಂಗಳೂರು: ಮೋದಿ 2.0 ಸರ್ಕಾರದ ಬಜೆಟ್ ನ್ನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ನಾಯಕರು ಏನ್ ಹೇಳಿದ್ದಾರೆ ಅನ್ನೋದರ ಡಿಟೇಲ್ಸ್ ಇಲ್ಲಿದೆ.

ಜನಸ್ನೇಹಿ ಬಜೆಟ್: ಬಿಎಸ್ವೈ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಲ್ಲಿಸಿದ ಬಜೆಟ್ ಜನಸ್ನೇಹಿ, ರೈತಪರವಾಗಿದೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಹಾಗೂ ವಿತ್ ಸಚಿವೆಗೆ ಧನ್ಯವಾದಗಳನ್ನ ಸಲ್ಲಿಸುತ್ತೇನೆ ಅಂತಾ ಹೇಳಿದ್ರು.

ಕಾರ್ಪೂರೇಟ್ ಪರವಾದ ಬಜೆಟ್: ಸಿದ್ದರಾಮಯ್ಯ

ಬಜೆಟ್ ನ 16 ಅಂಶಗಳಲ್ಲಿ 9 ಕಾರ್ಪೂರೇಟ್ ಪರವಾಗಿವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇಶಕ್ಕೆ ಬಂಡವಾಳ ಹರಿದು ಬರುವ ವಾತಾವರಣ ಇರಬೇಕು. ಇಲ್ದೇ ಹೋದ್ರೆ ಹೂಡಿಕೆ ಮಾಡಲು ಯಾರೂ ಬರುವುದಿಲ್ಲವೆಂದ ಅವರು, ಜನರು ಹೂಡಿಕೆಯ ಎಲ್ಐಸಿ ಶೇರುಗಳನ್ನ ಮಾರಲಾಗಿದೆ. ಇದು ದೇಶದ ಆರ್ಥಿಕ ದುಸ್ಥಿತಿ ಅಂತಾ ಹೇಳಿದ್ದಾರೆ.

ದೇಶಕ್ಕೆ ಮಾರಕ ಬಜೆಟ್: ಹೆಚ್ಡಿಕೆ

ಇಂದು ಮಂಡಿಸಿದ ಬಜೆಟ್ ದೇಶಕ್ಕೆ ಮಾರಕವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆಯನ್ನ ಅವನತಿ ಹಾದಿಗೆ ತಳ್ಳುವಂತಿದೆ. ಇದು ಕೇವಲ ಅಂಕಿಸಂಖ್ಯೆಯಗಳ ಬಜೆಟ್ ಆಗಿದೆ. 5 ವರ್ಷಗಳ ಅವಧಿಯಲ್ಲಿ ಘೋಷಣೆ ಮಾಡಿದ ಯೋಜನೆಗಳಲ್ಲಿ ಎಷ್ಟು ಅನುಷ್ಠಾನವಾಗಿವೆ ಅಂತಾ ಪ್ರಶ್ನಿಸಿದ್ರು.

ಮೋದಿಗೆ ಬಜೆಟ್ ಗೆ ಖುಷಿ ನೀಡಿಲ್ಲ: ಖರ್ಗೆ

ರಾಷ್ಟ್ರದ ಜನತೆಗೆ ನೀಡಿದ್ದ ಭರವಸೆಯನ್ನ ಈಡೇರಿಸಲು ಆಗಿಲ್ಲ ಅನ್ನೋ ನಿರಾಸೆ ಪ್ರಧಾನಿಗೆ ಮೂಡಿದೆ. ಹೀಗಾಗಿ ನಿರ್ಮಲಾ ಸೀತಾರಾಮನ್ ಸಲ್ಲಿಸಿದ ಬಜೆಟ್ ಬಿಜೆಪಿ ನಾಯಕರಿಗೆ ಖುಷಿ ನೀಡಿಲ್ಲವೆಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ರು. ಅಲ್ದೇ, ಬಿಜೆಪಿ ಅವರಿಗೆ ಬಜೆಟ್ ನಿರಾಸೆ ಮೂಡಿಸಿದೆ. ಹೀಗಾಗಿ ಬಜೆಟ್ ಮಂಡನೆ ವೇಳೆ ಮೇಜು ಕುಟ್ಟಿ ಉತ್ಸಾಹ ತುಂಬುವ ಕೆಲಸ ಮಾಡ್ಲಿಲ್ಲವೆಂದರು.

ಇತಿಹಾಸದಲ್ಲಿಯೇ ಸುದೀರ್ಘ ಬಜೆಟ್: ರಾಹುಲ ಗಾಂಧಿ

ವಿತ್ ಸಚಿವೆ ನಿರ್ಮಲಾ ಸೀತಾರಾಮನ್ ಸಲ್ಲಿಸಿರುವ ಬಜೆಟ್ ದೇಶದ ಇತಿಹಾಸದಲ್ಲಿಯೇ ಅತ್ಯಂತ ಸುದೀರ್ಘವಾಗಿದೆ ಅಂತಾ ಕಾಂಗ್ರೆಸ್ ಸಂಸದ ರಾಹುಲ ಗಾಂಧಿ ಟೀಕಿಸಿದ್ದಾರೆ. ದೇಶದಲ್ಲಿ ಉದ್ಯೋಗ ಸಮಸ್ಯೆ ಸಾಕಷ್ಟಿದೆ. ಕೇಂದ್ರದ 2020ನೇ ಸಾಲಿನ ಬಜೆಟ್ ನಲ್ಲಿ ಇದಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ರಾಹುಲ ಗಾಂಧಿ ಹೇಳಿದ್ದಾರೆ.

ಕಳಪೆ ಬಜೆಟ್: ಪಿ.ಚಿದಂಬರಂ

ನಿರ್ಮಲಾ ಸೀತಾರಾಮನ್ ಮಂಡಿಸಿದ 160 ನಿಮಿಷದ ಬಜೆಟ್ ಅತ್ಯಂತ ಕಳಪೆಯಾಗಿದೆ. ಇದು ನನ್ಗೆ ಅರ್ಥವಾಗಿಲ್ಲವೆಂದು ಮಾಜಿ ವಿತ್ ಸಚಿವ ಪಿ.ಚಿದಂಬರಂ ಹೇಳಿದ್ದಾರೆ. ಎರಡು ವರ್ಷಗಳಿಂದ ಸುದೀರ್ಘ ಭಾಷಣ ಕೇಳುತ್ತಿದ್ದೇವೆ. ಇದನ್ನ ಕೇಳಿ ನಮ್ಗೆಲ್ಲ ಆಯಾಸವಾಗಿದೆ. ಇದನ್ನಲ್ಲ ಕೇಳಿದ್ರೆ ಪ್ರಸಕ್ತ ವರ್ಷದ ಬಜೆಟ್ ಏನನ್ನ ಒಳಗೊಂಡಿದೆ ಅನ್ನೋದು ಅರ್ಥವಾಗಿಲ್ಲವೆಂದು ಹೇಳಿದ್ದಾರೆ.

ಬಜೆಟ್ ಸಂತೋಷ ನೀಡಿದೆ:  ಸದಾನಂದಗೌಡ

ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಅವರು, ಬಜೆಟ್ ಸಂತಸ ತಂದಿದೆ ಅಂತಾ ಹೇಳಿದ್ದಾರೆ. 2020-21ನೇ ಸಮಗ್ರ ಅಭಿವೃದ್ಧಿಯ ಬಜೆಟ್ ಆಗಿದೆ ಅಂತಾ ಹೇಳಿದ್ದಾರೆ. ಎಲ್ಲ ಕ್ಷೇತ್ರಗಳನ್ನ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆಯಾಗಿದೆ ಅಂತಾ ಹೇಳಿದ್ರು.

ಬಜೆಟ್ ನಲ್ಲಿ ನನ್ನ ಇಲಾಖೆಗೆ ಭರ್ಜರಿ ಅನುದಾನ: ಕೆ.ಎಸ್ ಈಶ್ವರಪ್ಪ

ಕೇಂದ್ರ ಸಚಿವೆ ಸಲ್ಲಿಸಿದ 2020ನೇ ಸಾಲಿನ ಬಜೆಟ್ ನಲ್ಲಿ ನನ್ನ ಇಲಾಖೆಗೆ ಭರ್ಜರಿ ಅನುದಾನ ಸಿಕ್ಕಿದೆ ಅಂತಾ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಗೆ 1.23 ಲಕ್ಷ ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಇದು ನನ್ಗೆ ಖುಷಿ ನೀಡಿದೆ ಎಂದರು.




Leave a Reply

Your email address will not be published. Required fields are marked *

error: Content is protected !!