ಅಂತಿಮವಾಗಿ ಅಖಾಡದಲ್ಲಿ ಉಳಿದವರ ಕಂಪ್ಲೀಟ್ ಲಿಸ್ಟ್ ಇಲ್ಲಿದೆ

876

ಸಿಂದಗಿ: ಪಟ್ಟಣದ 23 ವಾರ್ಡ್ ಗಳಿಗೆ ಫೆಬ್ರವರಿ 9ರಂದು ನಡೆಯಲಿರುವ ಚುನಾವಣೆಗೆ ಅಂತಿಮವಾಗಿ ಯಾರೆಲ್ಲ ಕಣದಲ್ಲಿ ಉಳಿದಿದ್ದಾರೆ ಅನ್ನೋ ಕುತೂಹಲ ಜನತೆಗಿದೆ. ಯಾವ ವಾರ್ಡ್ ನಲ್ಲಿ ಯಾರು ಅಭ್ಯರ್ಥಿಗಳು, ಯಾವ ಪಕ್ಷ ಅನ್ನೋದರ ಕಂಪ್ಲೀಟ್ ಲಿಸ್ಟ್ ಇಲ್ಲಿದೆ.

1ನೇ ವಾರ್ಡ್

ಕಾಂಗ್ರೆಸ್ ನಿಂದ ಕಲ್ಲೂರ ಪ್ರತಿಭಾ ಶಿವಕುಮಾರ, ಜೆಡಿಎಸ್ ನಿಂದ ಚೋರಗಸ್ತಿ ಮಹಾದೇವಿ ಶಿವಪುತ್ರ, ಬಿಜೆಪಿಯಿಂದ ಜಿಂಗಣಿ ಪಾರ್ವತಿ ಸುದರ್ಶನ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಹದ್ನೂರ ಜ್ಯೋತಿ ನಿಂಗಪ್ಪ ಕಣದಲ್ಲಿದ್ದಾರೆ.

2ನೇ ವಾರ್ಡ್

ಕಾಂಗ್ರೆಸ್ ನಿಂದ ನಡುವಿನಕೇರಿ ಸಂಗೀತಾ ಮಹಾಂತೇಶ, ಜೆಡಿಎಸ್ ನಿಂದ ಉಮಾದೇವಿ ಶರಣಪ್ಪ ಸುಲ್ಫಿ, ಬಿಜೆಪಿಯಿಂದ ಭಜಂತ್ರಿ ಹಣಮವ್ವ ನರಸಪ್ಪ, ಬಿಎಸ್ಪಿಯಿಂದ ಸತ್ತೆಮ್ಮ ರಾಜು ಬಹುಜನ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಬಡಿಗೇರ ಜ್ಯೋತಿ ರಾಜು ಸ್ಪರ್ಧಿಸಿದ್ದಾರೆ.

3ನೇ ವಾರ್ಡ್

ಬಿಜೆಪಿಯಿಂದ ನಂದಿಕೋಲ ಪ್ರಶಾಂತ ಗಿರಿಮಲ್ಲಯ್ಯ, ಜೆಡಿಎಸ್ ನಿಂದ ಕೆಂಚಪ್ಪ ಬಾಳಪ್ಪ ಪೂಜಾರಿ ಹಾಗೂ ಕಾಂಗ್ರೆಸ್ ನಿಂದ ಬೀರಗೊಂಡ ಶ್ರೀಶೈಲ ಮಲ್ಲಪ್ಪ ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.

4ನೇ ವಾರ್ಡ್

ಬಿಜೆಪಿಯಿಂದ ವಾಲೀಕಾರ ನಾಗಮ್ಮ ಚಂದ್ರಾಮ, ಜೆಡಿಎಸ್ ನಿಂದ ಸಾವಿತ್ರಿ ಮಲಕಪ್ಪ ಜೇರಟಗಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಕಡಕೋಳ ಕಲಾವತಿ ಅನಿಲ ಸ್ಪರ್ಧಿಸ್ತಿದ್ದಾರೆ.

5ನೇ ವಾರ್ಡ್

ಬಿಜೆಪಿಯಿಂದ ಗುಳ್ಳೂರ ಪರಶುರಾಮ ವಿಠ್ಠಲ, ಕಾಂಗ್ರೆಸ್ ನಿಂದ ಶರಣಬಸು ಭೀಮರಾಯ ನಾಟೀಕಾರ, ಜೆಡಿಎಸ್ ನಿಂದ ಯರನಾಳ ಬಸವರಾಜ ಚಂದ್ರಾಮಪ್ಪ ನಡುವೆ ಪೈಪೋಟಿ ನಡೆಯಲಿದೆ.

6ನೇ ವಾರ್ಡ್

ಬಿಜೆಪಿಯಿಂದ ಲಾಳಸಂಗಿ ರವಿ ಈರಪ್ಪ, ಕಾಂಗ್ರೆಸ್ ನಿಂದ ಸುಣಗಾರ ಹಣಮಂತ ಯಮನಪ್ಪ, ಜೆಡಿಎಸ್ ನಿಂದ ಅಂಕಲಗಿ ಜಂಗಪ್ಪ ನರಸಪ್ಪ ಸ್ಪರ್ಧಿಸಿದ್ದಾರೆ.

7ನೇ ವಾರ್ಡ್

ಬಿಜೆಪಿಯಿಂದ ಪತ್ತಾರ ರಾಮಚಂದ್ರ ಪರಪ್ಪ, ಕಾಂಗ್ರೆಸ್ ನಿಂದ ತಾಂಬೋಳಿ ಬಾಶಾಸಾಬ ಖಾಲೇಸಾಬ, ಜೆಡಿಎಸ್ ನಿಂದ ಬಸೀರಸಾಬ ಮರ್ತೂರ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಖೇಡ ರಾಜಅಹ್ಮದ ಅಕ್ಬರಸಾಬ ನಡುವೆ ಪೈಪೋಟಿ ನಡೆಯಲಿದೆ.

8ನೇ ವಾರ್ಡ್

ಜೆಡಿಎಸ್ ನಿಂದ ತಲಕಾರಿ ಬೀಬಿ ಇಕ್ಬಾಲ, ಕಾಂಗ್ರೆಸ್ ನಿಂದ ನಾಟೀಕಾರ ಖೈರುನಬಿ ಮಹ್ಮದಹನಿಪ, ಬಿಜೆಪಿಯಿಂದ ಬಾಗವಾನ ಜನ್ನತಬಿ ಚಾಂದಸಾಬ, ಪಕ್ಷೇತರ ಅಭ್ಯರ್ಥಿಯಾಗಿ ಚಾಂದಕವಾಠೆ ಮಾಬೂಬಿ ಮೋದಿನಸಾಬ ಹಾಗೂ ನಾಜೂಕಮಾ ಮುಕ್ತಮಸಾಬ ಮರ್ತೂರ ಕಣದಲ್ಲಿದ್ದಾರೆ.

9ನೇ ವಾರ್ಡ್

ಕಾಂಗ್ರೆಸ್ ನಿಂದ  ಹಾಸೀಮಪಿರ ಆಳಂದ, ಬಿಜೆಪಿಯಿಂದ ಮಹಿಬೂಬಅಲಿ ಲಾಲಸಾಹೇಬ ದೇವರಮನಿ, ಜೆಡಿಎಸ್ ನಿಂದ ವಾಲೀಕಾರ ಮಹಿಬೂಬ ಅಮೀನುದ್ದಿನ ಹಾಗೂ ಬಿಎಸ್ಪಿಯಿಂದ ಹಾಜಿಮಲಂಗ ಹುಸೇನಬಾಷಾ ಆಲಮೇಲ ಸ್ಪರ್ಧಿಸ್ತಿದ್ದಾರೆ.

10ನೇ ವಾರ್ಡ್

ಬಿಜೆಪಿಯಿಂದ ಅಂಬಲಗಿ ಬಸಲಿಂಗಮ್ಮ ಸಿದ್ದಪ್ಪ ಹಾಗೂ ಜೆಡಿಎಸ್ ನಿಂದ ದುರ್ಗಿ ಪಾರ್ವತಿ ಗುರಪ್ಪ ಕಣದಲ್ಲಿದ್ದಾರೆ.

11ನೇ ವಾರ್ಡ್

 ಬಿಜೆಪಿಯಿಂದ ವಿಜಯಲಕ್ಷ್ಮಿ ಗಿರೀಶ ನಾಗೂರ ಹಾಗೂ ಜೆಡಿಎಸ್ ನಿಂದ ಗೋಣಿ ಮೀನಾಕ್ಷಿ ಚೆನ್ನಪ್ಪ ಕಣದಲ್ಲಿದ್ದಾರೆ.

12ನೇ ವಾರ್ಡ್

ಜೆಡಿಎಸ್ ನಿಂದ  ಈರಪ್ಪ ಶರಣಪ್ಪ ಮಸೂತಿ, ಬಿಜೆಪಿಯಿಂದ ಮಹಾಂತೇಶ ಗುರುಲಿಂಗಪ್ಪ ಬಿರಾದಾರ ಹಾಗೂ ಪಕ್ಷೇತರ ಸಂಜೀವ ಗುರುಲಿಂಗಯ್ಯ ನಂದಿಕೋಲ ಸ್ಪರ್ಧೆ ಮಾಡ್ತಿದ್ದಾರೆ.

13ನೇ ವಾರ್ಡ್

ಕಾಂಗ್ರೆಸ್ ನಿಂದ ಭಾವಿಕಟ್ಟಿ ಸಂತೋಷ ನಿಂಗಪ್ಪ, ಜೆಡಿಎಸ್ ನಿಂದ ಶಾಂತವೀರ ಮಲ್ಲಪ್ಪ ಮನಗೂಳಿ ಹಾಗೂ ಬಿಜೆಪಿಯಿಂದ ಸ್ಥಾವರಮಠ ಶೈಲಜಾ ಬಸವರಾಜ ಅಂತಿಮವಾಗಿ ಕಣದಲ್ಲಿದ್ದಾರೆ.

14ನೇ ವಾರ್ಡ್

ಬಿಎಸ್ಪಿಯಿಂದ ಕರ್ಜಗಿ ಮಹ್ಮದಅಸ್ಪಾಕ ದಾವಾಲಸಾಬ, ಬಿಜೆಪಿಯಿಂದ ಚನ್ನಬಸಪ್ಪ ಸಿದ್ದಪ್ಪಕುಮಟಗಿ, ಕಾಂಗ್ರೆಸ್ ನಿಂದ ಬಿರಾದಾರ ಶಾಂತವೀರ ಸಿದ್ದಪ್ಪ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಚಂದ್ರಶೇಖರ ಜಗದೀಶ ಬಿರಾದಾರ, ಮಂದೇವಾಲ ಇಮಾಮಾಸಾಬ ದಸ್ತಗೀರಸಾಬ ಸ್ಪರ್ಧೆ ಮಾಡ್ತಿದ್ದಾರೆ.

15ನೇ ವಾರ್ಡ್

ಬಿಎಸ್ಪಿಯಿಂದ ಕೂಚಬಾಳ ಸುಜಾತ ಮಲ್ಲಿಕಾರ್ಜುನ, ಕಾಂಗ್ರೆಸ್ ನಿಂದ ಡೋಣೂರ ಭಾಗವ್ವ ಬಸಪ್ಪ ಹಾಗೂ ಜೆಡಿಎಸ್ ನಿಂದ ಪೂಜಾರಿ ಶೈಲಾ ಬಸಪ್ಪ ನಡುವೆ ಪೈಪೋಟಿ ನಡೆಯಲಿದೆ.

16ನೇ ವಾರ್ಡ್

ಜೆಡಿಎಸ್ ನಿಂದ ಅತ್ತಾರ ದಾವುದಸಾಬ ಹುಸೇನಸಾಬ, ಕಾಂಗ್ರೆಸ್ ನಿಂದ ಮಲ್ಲು ಕುರಿ ಹಾಗೂ ಪಕ್ಷೇತರರಾಗಿ ಭೀಮಣ್ಣ ಕಿಸಾನ ಕಲಾಲ ಕಣದಲ್ಲಿದ್ದಾರೆ.

17ನೇ ವಾರ್ಡ್

ಕಾಂಗ್ರೆಸ್ ನಿಂದ ಚೌರ ಸಂದೀಪ ಭೀಮಪ್ಪ, ಬಿಎಸ್ಪಿಯಿಂದ ಪೂಜಾರಿ ಹರ್ಷವರ್ಧನ ಮಹಾಲಿಂಗಪ್ಪ, ಜೆಡಿಎಸ್ ನಿಂದ ರಾಜಶೇಖರ ಮಹಾದೇವಪ್ಪ ಕೂಚಬಾಳ ಹಾಗೂ ಪಕ್ಷೇತರರಾಗಿ ಗುರುಪಾದ ಭೀಮಪ್ಪ ಮನಗೂಳಿ ನಡುವೆ ಸ್ಪರ್ಧೆ ನಡೆಯಲಿದೆ.

18ನೇ ವಾರ್ಡ್

ಕಾಂಗ್ರೆಸ್ ನಿಂದ ದೊಡ್ಡಮನಿ ಲಕ್ಷ್ಮಣ ಶಂಕರ, ಜೆಡಿಎಸ್ ನಿಂದ ನಾರಾಯಣಕರ ರಾಜಣ್ಣ ಧರ್ಮಪ್ಪ, ಬಿಜೆಪಿಯಿಂದ ಶೇರಕಾನೆ ಪ್ರಕಾಶ ಪರಸರಾಮ ಹಾಗೂ ಬಿಎಸ್ಪಿಯಿಂದ ಹುಸನಪ್ಪ ಯಲ್ಲಪ್ಪ ಶರಾಬಿ ಸ್ಪರ್ಧೆ ಮಾಡಿದ್ದಾರೆ.

19ನೇ ವಾರ್ಡ್

ಬಿಜೆಪಿಯಿಂದ ಜ್ಯೋತಿ ಎಸ್ ಗುಡಿಮನಿ, ಜೆಡಿಎಸ್ ನಿಂದ ನರಗೋದಿ ಜ್ಯೋತಿ ರಾಜಶೇಖರ, ಕಾಂಗ್ರೆಸ್ ನಿಂದ ಮುಲ್ಲಾ ತಾಹಾಸೀನ ಆಬಿದ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಬಿಜಾಪೂರ ತಾಹೇರಾಬೇಗಂ ಶಫೀಅಹ್ಮದ ಅಂತಿಮವಾಗಿ ಕಣದಲ್ಲಿದ್ದಾರೆ.

20ನೇ ವಾರ್ಡ್

ಬಿಜೆಪಿಯಿಂದ ಬಸಮ್ಮ ಚಂದ್ರಶೇಖರ ಸಜ್ಜನ, ಜೆಡಿಎಸ್ ನಿಂದ ಹಡಪದ ಮಲ್ಲಮ್ಮ ಗುರಬಸಪ್ಪ, ಕಾಂಗ್ರೆಸ್ ನಿಂದ ಜಾಲವಾದಿ ಕಮಲಬಾಯಿ ಮಲ್ಲಪ್ಪ ಸ್ಪರ್ಧಿಸ್ತಿದ್ದಾರೆ.

21ನೇ ವಾರ್ಡ್

ಬಿಜೆಪಿಯಿಂದ ಗುಣಾರಿ ನೀಲಕಂಠ ದಾನಪ್ಪ, ಜೆಡಿಎಸ್ ನಿಂದ ಬಿಸನಾಳ ಹುಚ್ಚಪ್ಪ ಕಲ್ಲಪ್ಪ, ಕಾಂಗ್ರೆಸ್ ನಿಂದ ಮಲ್ಲೇದ ಶ್ರೀಮಂತ ಶಾಂತಪ್ಪ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಪತ್ತಾರ ರಾಮಚಂದ್ರ ಪರಪ್ಪ, ಬಂಕಲಗಿ ಗೊಲ್ಲಾಳಪ್ಪ ನಿಂಗಪ್ಪ, ಕರಜಗಿ ಸೈಪನಸಾಬ ಅಬ್ದುಲಖಾದಿರ, ಶಂಬೇವಾಡ ಮಾಂತಪ್ಪ ಸ್ಪರ್ಧಿಸಿದ್ದಾರೆ.

22ನೇ ವಾರ್ಡ್

ಕಾಂಗ್ರೆಸ್ ನಿಂದ ಟಣಕೇದಾರ ಭೀಮರಾಯ ಮಹಾದೇವಪ್ಪ, ಬಿಜೆಪಿಯಿಂದ ನಾಯ್ಕೋಡಿ ರಾಮಪ್ಪ ಶಿವಪ್ಪ, ಜೆಡಿಎಸ್ ನಿಂದ ಶರಣಗೌಡ ಮಡಿವಾಳಪ್ಪ ಪಾಟೀಲ ನಡುವೆ ಸ್ಪರ್ಧೆ ನಡೆಯಲಿದೆ.

23ನೇ ವಾರ್ಡ್

ಕಾಂಗ್ರೆಸ್ ನಿಂದ ನಾಯ್ಕೋಡಿ ಮಹಾದೇವಿ ಭೀಮಣ್ಣ, ಬಿಜೆಪಿಯಿಂದ ಬಂಕಲಗಿ ಯಮನವ್ವ ಮಲಕಪ್ಪ, ಜೆಡಿಎಸ್ ನಿಂದ ಖಾಜಾಬಿ ರಫೀಕ ಮಣೂರ ಸ್ಪರ್ಧೆ ಮಾಡ್ತಿದ್ದಾರೆ.

ಇದು ಅಂತಿಮವಾಗಿ ಕಣದಲ್ಲಿ ಉಳಿದವರು ಕಂಪ್ಲೀಟ್ ಲಿಸ್ಟ್ ಆಗಿದೆ. ಇಂದಿನಿಂದ ಎಲ್ಲ ಅಭ್ಯರ್ಥಿಗಳು ತಮ್ಮ ವಾರ್ಡ್ ನಲ್ಲಿ ಪ್ರಚಾರ ಕಾರ್ಯ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!