ವೋಟಿಗೆ ನೋಟ್ ಕೊಟ್ಟೋರು ಭಾರಿ ಮಸಲತ್ ಮಾಡ್ಯಾರ ನೋಡ್ರಿ ಅಧಿಕಾರಿಗಳೇ…!

502

ಸಿಂದಗಿ: ಪಟ್ಟಣದ ಪುರಸಭೆಯ 23 ವಾರ್ಡ್ ಗಳಿಗೆ ನಾಳೆ ವೋಟಿಂಗ್ ನಡೆಯಲಿದೆ. ಈಗಾಗ್ಲೇ 84 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ. ಇವರೆಲ್ಲರು ಇಷ್ಟುದಿನ ಭರ್ಜರಿ ಪ್ರಚಾರ ನಡೆಸಿದ್ರು. ಇದರ ಜೊತೆಗೆ ಹೆಚ್ಚು ಕೆಲಸ ಮಾಡ್ತಿರುವುದು ವೋಟಿಗೆ ನೋಟು.

ಬಹಿರಂಗ ಪ್ರಚಾರದ ಹೊತ್ತಿನಲ್ಲಿಯೇ ಪೈಸಾ ಕೆಲಸ ನಡೆಸಿತ್ತು. ನಿನ್ನೆ ಹಾಗೂ ಇಂದು ಅದು ಡಬಲ್ ಆಗಿದೆ. ಈ ಬಗ್ಗೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ನೇರವಾಗಿ ಪಕ್ಷದ ಹೆಸರಿನಲ್ಲಿಯೇ ಬರೆದುಕೊಂಡಿದ್ದಾರೆ. ಆದ್ರೆ, ವಾರ್ಡಿನ ಮತದಾರರು ಎ ಅಂದರ್ ಕೀ ಖೇಲ್ ಅಂತಿದ್ದಾರೆ. ಹೀಗಾಗಿ ವಾರ್ಡ್ ಗಳಲ್ಲಿ ಮಿನಿ ಅಡ್ಡಾ ಸೃಷ್ಟಿಯಾಗಿವೆ. ಅಭ್ಯರ್ಥಿಗಳು ತಮ್ಮ ಖಾಸಾ ಖಾಸಾ ಮಂದಿ ಕೈಯಾಗ ಪಿಂಕ್ ಮತ್ತು ಯಲ್ಲೋ ಕಲರ್ ನೋಟ್ ಕೊಟ್ಟಿದ್ದಾರೆ. ಹೀಗೆ ನೋಟು ಕೊಟ್ಟವರು ಭರ್ಜರಿಯಾಗಿ ಪ್ಲಾನ್ ಮಾಡಿದ್ದಾರೆ.

ಯಾರು ತಮಗೆ ವೋಟ್ ಮಾಡ್ತೀವಿ ಅಂತ್ಹೇಳಿ ನೋಟು ತೆಗೆದುಕೊಂಡವರಿಂದ ಸಾಕ್ಷಿ ನೀಡಲು ಹೇಳಿದ್ದಾರೆ. ಅರೇ ಮತದಾರ ಅದ್ಹೇಗೆ ಸಾಕ್ಷಿ ಕೊಡ್ತಾನೆ ಅಂತಾ ಕೇಳ್ಬೇಡಿ. ಈಗ ಟೆಕ್ನಾಲಜಿ ಸಿಕ್ಕಾಪಟ್ಟೆ ಫಾಸ್ಟ್ ಇದೆ. ಹೀಗಾಗಿ ಎಲ್ಲವೂ ಸಾಧ್ಯ. ಚಿಕ್ಕಚಿಕ್ಕ ಕ್ಯಾಮೆರಾ ಮೊಬೈಲ್ ಗಳಿಂದ ಮತದಾನ ಮಾಡುವಾಗ ಫೋಟೋ ತೆಗೆದುಕೊಂಡು ಬರಬೇಕು ಅನ್ನೋ ಕಂಡಿಷನ್ ಹಾಕಿದ್ದಾರಂತೆ. ಈ ಬಗ್ಗೆ ಮತದಾರರೆ ಮಾತ್ನಾಡಿಕೊಳ್ತಿದ್ದಾರೆ.

ಇದರ ಜೊತೆಗೆ ಇನ್ನು ಕೆಲ ಇನ್ ಸೈಡ್ ಪ್ಲಾನ್ ಮಾಡಿದ್ದಾರೆ. ಹೀಗಾಗಿ ವೋಟ್ ಮಾಡುವ ಟೈಂನಲ್ಲಿ ಮೊಬೈಲ್ ಬಳಕೆ ಮಾಡದಂತೆ ನೋಡಿಕೊಳ್ಳಬೇಕಾಗಿದೆ. ಈ ಮೂಲಕ ಅಭ್ಯರ್ಥಿಗಳು ಅಧಿಕಾರಿಗಳಿಗೆ ಪರೋಕ್ಷವಾಗಿ ಹಾಕಿರುವ ಸವಾಲನ್ನ ಮೆಟ್ಟಿ ನಿಂತು, ಗೌಪ್ಯ ಮತದಾನದ ಪಾವಿತ್ರ್ಯತೆಯನ್ನ ಕಾಪಾಡಿ ಪ್ರಜಾಪ್ರಭುತ್ವದ ಮೌಲ್ಯಗಳನ್ನ ಎತ್ತಿ ಹಿಡಿಯಬೇಕಿದೆ.




Leave a Reply

Your email address will not be published. Required fields are marked *

error: Content is protected !!