ಜೋರಾಗಿದೆ ದಿಲ್ಲಿ ವೋಟಿಂಗ್

341

ನವದೆಹಲಿ: ರಾಷ್ಟ್ರರಾಜಧಾನಿಯ 70 ವಿಧಾನಸಭಾ ಕ್ಷೇತ್ರಗಳಿಗೆ ವೋಟಿಂಗ್ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ವೋಟಿಂಗ್ ಶುರುವಾಗಿದೆ. ಕೋಲ್ಡ್ ವಾತಾವರಣದಿಂದ ಮತದಾರರು ನಿಧಾನವಾಗಿ ಬೂತ್ ಕಡೆ ಹೆಜ್ಜೆ ಹಾಕ್ತಿದ್ದಾರೆ. ಹೀಗಾಗಿ ಈಗ ಒಂದಿಷ್ಟು ಚುರುಕು ಪಡೆದುಕೊಳ್ತಿದೆ.

70 ಕ್ಷೇತ್ರಗಳಿಗೆ 672 ಮಂದಿ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. 1.47 ಕೋಟಿಗೂ ಅಧಿಕ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಆಪ್ ಪಾರ್ಟಿ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಏರುವ ತವಕದಲ್ಲಿದೆ. ಕಳೆದ ಬಾರಿ 70ರಲ್ಲಿ 67 ಸೀಟ್ ಗೆದ್ದು ಬೀಗಿತ್ತು.

ಕಳೆದ ವಿಧಾನಸಭೆಯಲ್ಲಿ ಬಿಜೆಪಿ ಕೇವಲ 3 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು. ಆದ್ರೆ, ಲೋಕಸಭಾ ಚುನಾವಣೆಯಲ್ಲಿ 7ಕ್ಕೆ 7 ಸೀಟ್ ಗಳನ್ನ ಗೆದ್ದು ಉತ್ಸಾಹದಲ್ಲಿದ್ದು, ವಿಧಾನಸಭೆ ಚುನಾವಣೆಯಲ್ಲಿಯೂ ಕಮಾಲ್ ಮಾಡಲು ನೋಡ್ತಿದೆ. ಈ ಮೂಲಕ ಆಪ್ ಗೆ ಸೋಲುಣಿಸಲು ಸಾಕಷ್ಟು ಕಸರತ್ತು ಮಾಡಿದೆ.

ಇನ್ನು ಕಾಂಗ್ರೆಸ್ ಸತತ ಮೂರು ಸಾರಿ ಅಧಿಕಾರ ನಡೆಸಿತ್ತು. ಆಪ್ ಎಬ್ಬಿಸಿದ ಹವಾದಿಂದಾಗಿ ಕಳೆದ ಬಾರಿ ಒಂದೇ ಒಂದು ಸೀಟ್ ಗೆದ್ದಿರಲಿಲ್ಲ. ಲೋಕಸಭೆಯಲ್ಲಿಯೂ ಗೆಲುವಿನ ಸಿಹಿ ಉಂಡಿಲ್ಲ. ಇದೀಗ ಆಪ್ ಹಾಗೂ ಬಿಜೆಪಿಗೆ ಠಕ್ಕರ್ ಕೊಡಲು ನೋಡ್ತಿದೆ. ಇವರೆಲ್ಲರ ಭವಿಷ್ಯ ಫೆಬ್ರವರಿ 11ಕ್ಕೆ ಹೊರ ಬೀಳಲಿದೆ.




Leave a Reply

Your email address will not be published. Required fields are marked *

error: Content is protected !!