ನಿಜವಾಯ್ತು ‘ಪ್ರಜಾಸ್ತ್ರ’ ವರದಿ: ವೋಟ್ ಮಾಡಿರುವ ಫೋಟೋ ಕ್ಲಿಕ್

574

ಸಿಂದಗಿ: ಸಿಂದಗಿ ಪುರಸಭೆ ವಾರ್ಡ್ ಮತದಾನ ಅಬ್ಬರದಿಂದ ಕೂಡಿದೆ. ಇದೇ ವೇಳೆ ವೋಟ್ ಮಾಡಿರುವ ಫೋಟೋ ತೆಗೆದಿರುವ ಘಟನೆ ಬಸ್ ನಿಲ್ದಾಣದ ಬಳಿಯ ಕನ್ನಡ ಗಂಡು ಮಕ್ಕಳ‌ ಶಾಲೆಯ ಬೂತ್ ನಲ್ಲಿ ನಡೆದಿದೆ. ಈ ಮೂಲಕ ಕಳೆದ ಎರಡು ದಿನಗಳ ಹಿಂದೆ ‘ಪ್ರಜಾಸ್ತ್ರ’ ಈ ಬಗ್ಗೆ ಮಾಡಿದ್ದ ವರದಿ ನಿಜವಾಗಿದೆ. ವೋಟಿಗೆ ನೋಟ್ ಕೊಟ್ಟವರು ಮತದಾನದ ಫೋಟೋ ಸಾಕ್ಷಿ ಪ್ಲಾನ್ ಮಾಡಿದ್ದಾರೆ ಅನ್ನೋ ಇನ್ ಸೈಡ್ ಸ್ಟೋರಿ ಮಾಡಿತ್ತು.

ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತ ಮತದಾರರು

ವಾರ್ಡ್ ನಂಬರ್ 15ಕ್ಕೆ ಸಂಬಂಧಿಸಿದ ಮತದಾನ ಬಸ್ ನಿಲ್ದಾಣದ ಹತ್ತಿರದ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ನಡೆಯುತ್ತಿದೆ. ಈ ವೇಳೆ ಗೌಪ್ಯ ಮತದಾನದ ಬಗ್ಗೆ ವ್ಯಕ್ತಿಯೊಬ್ಬ ಫೋಟೋ ತೆಗೆದುಕೊಂಡಿರುವ ಘಟನೆ ನಡೆದಿದೆ. ಇದು ಗೊತ್ತಾದ ತಕ್ಷಣ ಆತನನ್ನ ಹಿಡಿಯಲು ಪೊಲೀಸ್ ಸಿಬ್ಬಂದಿ ಶಾಲಾ ಮೈದಾನದ ತುಂಬಾ ಓಡಾಡಬೇಕಾಯ್ತು. ಆತ ಎದ್ದು ಬಿದ್ದು ಕೊನೆಗೆ ಸಿಕ್ಕ.

ಫೋಟೋ ತೆಗೆದ ವ್ಯಕ್ತಿ

ಬಳಿಕ ವೋಟ್ ಮಾಡಿರುವ ಫೋಟೋ ತೆಗೆದಿರುವ ವ್ಯಕ್ತಿಯನ್ನ ಹಿಡಿದ ಪೊಲೀಸ್ ಸಿಬ್ಬಂದಿ ಫೋಟೋ ಡೀಲಿಟ್ ಮಾಡಲು ಹೇಳಿದ್ರು. ಈ ಬಗ್ಗೆ ಇಲ್ಲಿನ ಅಧಿಕಾರಿಗಳನ್ನ ಕೇಳಿದ್ರೆ ಏನ್ ಮಾಡಕ್ಕೆ ಆಗುತ್ತೆ ಸರ್ ಅಂತಾ ಹೇಳುವ ಮೂಲಕ ಉಡಾಫೆ ಉತ್ತರ ನೀಡ್ತಿದ್ದಾರೆ. ಈ ಬಗ್ಗೆ ಚುನಾವಣಾ ಅಧಿಕಾರಿಗಳಾದ ತಹಶ್ಲೀದಾರ್ ಅವರ ಗಮನ ಹರಿಸಬೇಕೆಂದು ಇತರೆ ಮತದಾರರು ಮನವಿ ಮಾಡಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!