ವಿಜಯಪುರದಲ್ಲಿಂದ ಮತ್ತೆ ನಾಲ್ವರು ಕರೋನಾದಿಂದ ಗುಣಮುಖ

385

ವಿಜಯಪುರ: ಡೆಡ್ಲಿ ಕರೋನಾದಿಂದ ಗುಣಮುಖರಾಗಿ ಇಂದು ಮತ್ತೆ ನಾಲ್ವರು ಡಿಸ್ಚಾರ್ಜ್ ಆಗಿದ್ದಾರೆ. ನಗರದ ಜಿಲ್ಲಾಸ್ಪತ್ರೆಯಿಂದ ಕರೋನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ನಾಲ್ವರು ಬಿಡುಗಡೆಯಾಗಿದ್ದಾರೆ.

ಪೆಸೆಂಟೆ ನಂಬರ್ 276, 25 ವರ್ಷದ ಯುವಕ, 305, 12 ವರ್ಷದ ಬಾಲಕ, 313, 55 ವರ್ಷದ ಮಹಿಳೆ ಹಾಗೂ 415, 18 ವರ್ಷದ ಯುವತಿ ಸೇರಿ ನಾಲ್ವರು ಇಂದು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ 46 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದುವರೆಗೂ 15 ಜನರು ಗುಣಮುಖರಾಗಿದ್ದಾರೆ. ಇನ್ನು 29 ಜನ ಸೋಂಕಿತರಿಗೆ ಚಿಕಿತ್ಸೆ ಮುಂದುವರೆದಿದೆ. ಇಬ್ಬರು ಸಾವನ್ನಪ್ಪಿದ್ದಾರೆ.




Leave a Reply

Your email address will not be published. Required fields are marked *

error: Content is protected !!