ಸಿಂದಗಿ ತಾಲೂಕಾಡಳಿತ ಉಚಿತ ಊಟ ಸೇವೆಗೆ ಭೂಸನೂರ ಸಾಥ್

953

ಸಿಂದಗಿ: ಕರೋನಾ ಮಹಮಾರಿ ಎಲ್ಲೆಡೆ ವ್ಯಾಪಿಸಿ, ಜನರನ್ನ ಸಂಕಷ್ಟಕ್ಕೆ ಸಿಲುಕಿಸಿದೆ. ಇಂತಹ ಸಂದರ್ಭದಲ್ಲಿ ಅವರ ಪರ ನಿಲ್ಲುವ ಮೂಲಕ ಅವರಿಗೆ ಒಂದಿಷ್ಟು ನೆರವು ಹಾಗೂ ಧೈರ್ಯ ತುಂಬುವ ಕೆಲಸ ಮಾಡಲಾಗ್ತಿದೆ ಎಂದು ಮಾಜಿ ಶಾಸಕ ರಮೇಶ ಭೂಸನೂರು ಹೇಳಿದ್ದಾರೆ.

ಪಟ್ಟಣದ ತಾಲೂಕು ಆಡಳತದಿಂದ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ಅದಕ್ಕೆ ದಿನಸಿ ವಸ್ತುಗಳ ಪೂರೈಕೆ ಹಾಗೂ ಪತ್ರಿಕಾ ಬಳಗಕ್ಕೆ ಮಾಸ್ಕ್, ಸ್ಯಾನಟೈಸರ್ ವಿತರಣೆ ಮಾಡಿ ಮಾತ್ನಾಡಿದ್ರು. ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರು, ಉಚಿತವಾಗಿ ಊಟದ ವ್ಯವಸ್ಥೆ ಮಾಡಿ, ನಿಗರ್ತಿಕರು, ಬಡವರ ಹಸಿವು ನಿಗಿಸ್ತಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ರು.

ಇನ್ನು ತಾಲೂಕಾಡಳಿತದ ಉಚಿತ ಊಟದ ಕಾರ್ಯಕ್ಕೆ 1 ಟನ್ ಅಕ್ಕಿ, 5 ಕ್ವಿಂಟಾಲ್ ಸಕ್ಕರೆ, 5 ಕ್ವಿಂಟಾಲ್ ರವಾ, 30 ಕೆಜಿ ಡಾಲ್ಡಾ ಸೇರಿದಂತೆ ಇತರ ಆಹಾರ ವಸ್ತುಗಳನ್ನು ನೀಡಲಾಗುತ್ತಿದೆ. ಅಲ್ಲದೇ ಆಲಮೇಲದ ಹಡಪದ ಸಮಾಜದ ಜನರಿಗೆ 5 ಕೆಜಿ ಗೋಧಿ ಹಿಟ್ಟು, 5 ಕೆಜಿ ಅಕ್ಕಿ, 1 ಕೆಜಿ ಸಕ್ಕರೆ, 1 ಕಿಲೋ ಎಣ್ಣೆ, 1 ಕೆಜಿ ಬೇಳೆ ಸೇರಿದಂತೆ 600 ದಿನಸಿ ಕಿಟ್ ಮತ್ತು ಅಗತ್ಯ ವಸ್ತುಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದ್ರು.

ತಹಶೀಲ್ದಾರ್ ಸಂಜೀವಕುಮಾರ ದಾಸರ ಮಾತ್ನಾಡಿ, ಸ್ಥಳೀಯ ಶಾಸಕರು, ಮಾಜಿ ಶಾಸಕರು, ಜನಪ್ರತಿನಿಧಿಗಳು ಹಾಗು ಸಂಘ ಸಂಸ್ಥೆಗಳು ಜನರ ಹಸಿವು ನೀಗಿಸಲು ನೆರವು ನೀಡುವ ಮೂಲಕ ತಾಲೂಕಾಡಳಿತದ ನೆರವಿಗೆ ನಿಂತಿದ್ದಾರೆ ಎಂದರು.

ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಸಂತೋಷ ಪಾಟೀಲ(ಡಂಬಳ), ಗುರು ತಳವಾರ, ಶ್ರೀಶೈಲಗೌಡ ಬಿರಾದಾರ(ಮಾಗಣಗೇರಿ), ಅರವಿಂದ ಸೂಡಿ, ಸಾಯಬಣ್ಣ ಪುರದಾಳ, ಮಲ್ಲು ಪೂಜಾರಿ, ಸಿದ್ದು ಬುಳ್ಳಾ, ರವಿ ನಾಯ್ಕೋಡಿ, ಸಿದ್ರಾಮ ಪೂಜಾರಿ, ಶಿವಾನಂದ ಆಲಮೇಲ, ಸುನಂದಾ ಯಂಪೂರೆ, ಅನುಸೂಯಾ ಪರಗೊಂಡ ಸೇರಿದಂತೆ ಅನೇಕರು ಹಾಜರಿದ್ರು.




Leave a Reply

Your email address will not be published. Required fields are marked *

error: Content is protected !!