ಸಂವಿಧಾನ ಉಳಿಯಬೇಕಾದರೆ ಸಿನ್ಹಾ ರಾಷ್ಟ್ರಪತಿಯಾಗಬೇಕು

156

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ದೇಶದ ಸಂವಿಧಾನ ಅಪಾಯದಲ್ಲಿದೆ. ಅದು ಉಳಿಯಬೇಕಾದರೆ ಯಶವಂತ್ ಸಿನ್ಹಾ ರಾಷ್ಟ್ರಪತಿಯಾಗಬೇಕು ಎಂದು ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ನಗರದ ಶಾಂಗ್ರಿಲಾ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

ಯಶವಂತ್ ಸಿನ್ಹಾ ಸಿವಿಲ್ ಸರ್ವಿಸ್ ನಲ್ಲಿದ್ದವರು. ರಾಜಕೀಯಕ್ಕೆ ಬಂದು ಉನ್ನತ ಸ್ಥಾನದಲ್ಲಿದ್ದವರು. ಮುತ್ಸದ್ದಿ ರಾಜಕಾರಣಿಯಾಗಿದ್ದಾರೆ. ಅವರು ಶಾಸಕಾಂಗ ಸಭೆಯಲ್ಲಿ ಬಂದು ಮತ ಕೇಳಿದ್ದಾರೆ. ನಾವು ಮತ ಹಾಕುವ ಭರವಸೆ ನೀಡಿದ್ದೇವೆ ಎಂದರು.

ಈ ವೇಳೆ ಮಾತನಾಡಿದ ರಾಷ್ಟ್ರಪತಿ ಅಭ್ಯರ್ಥಿ ಸಿನ್ಹಾ, ಪ್ರತಿಪಕ್ಷಗಳ ಗೌರವಾನ್ವಿತ ವ್ಯಕ್ತಿಗಳನ್ನು ಅವಮಾನ ಮಾಡುವ ದೃಷ್ಟಿಯಿಂದ, ನಾಯಕರನ್ನು ಹತ್ತಿಕ್ಕುವ ಕೆಲಸವನ್ನು ತನಿಖಾ ಸಂಸ್ಥೆಗಳಿಂದ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದರು. ಕರ್ನಾಟಕ, ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದರು.

ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಹಲವು ನಾಯಕರಿದ್ದರು.




Leave a Reply

Your email address will not be published. Required fields are marked *

error: Content is protected !!