ಕಾರಿಗೆ ಕ್ರೂಸರ್ ಡಿಕ್ಕಿ: ಇಬ್ಬರ ಸಾವು

245

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ಕಾರು ಹಾಗೂ ಕ್ರೂಸರ್ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟ ಘಟನೆ ಕಮಲಾಪುರ ತಾಲೂಕಿನ ಭೀಮನಾಳ ಕ್ರಾಸ್ ಹತ್ತಿರ ನಡೆದಿದೆ. ತೆಲಂಗಾಣ ಮೂಲದ ಮಹ್ಮದ್ ಮಜಿದ್ ಹಾಗೂ ಸಾದಯಾ ಉನ್ನಿಸಾ ಬೇಗಂ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಇನ್ನು ಮೂವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಖ್ವಾಜಾ ಬಂದೇ ನವಾಜ್ ಗೆ ಹೊರಟಿದ್ದಾಗ ಅಪಘಾತ ಸಂಭವಿಸಿದೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!