ಕುಂದಗೋಳ ಪಟ್ಟಣ ಪಂಚಾಯ್ತಿ ಬಿಜೆಪಿ ಪಾಲಿಗೆ

351

ಹುಬ್ಬಳ್ಳಿ: ಕುಂದಗೋಳ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿಯೂ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. 19 ವಾರ್ಡ್ ಗಳಲ್ಲಿ 12ರಲ್ಲಿ ಬಿಜೆಪಿ ಗೆದ್ದಿದೆ. 5 ವಾರ್ಡ್ ಗಳಲ್ಲಿ ಕಾಂಗ್ರೆಸ್, 2ರಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ. ಇನ್ನು ಜೆಡಿಎಸ್ ಖಾತೆ ತೆರೆಯುವಲ್ಲಿ ವಿಫಲವಾಗಿದೆ.

ಕುಂದಗೋಳ ಉಪ ಚುನಾವಣೆಯಲ್ಲಿ ಶಿವಳ್ಳಿ ಪತ್ನಿ ಕುಸುಮಾವತಿ ಶಿವಳ್ಳಿ ಗೆದ್ದು ಶಾಸಕಿಯಾಗಿದ್ದಾರೆ. ಆದ್ರೆ, ಪಟ್ಟಣ ಪಂಚಾಯ್ತಿಯಲ್ಲಿ ಕೇವಲ 5 ಸ್ಥಾನಗಳಿಗೆ ಕಾಂಗ್ರೆಸ್ ಖುಷಿ ಪಡಬೇಕಾಗಿದೆ. ಉಳಿದಂತೆ 12 ವಾರ್ಡ್ ಗಳಿಗೆ ಕಮಲ ಅರಳಿದೆ.




Leave a Reply

Your email address will not be published. Required fields are marked *

error: Content is protected !!