‘ವಿಶ್ವ’ದಲ್ಲಿ ಪಾಕ್ ಬೆವರಿಳಿಸಿದ ಭಾರತ

379

ಅಂತಾರಾಷ್ಟ್ರೀಯ ಸುದ್ದಿ

ಪ್ಯಾರಿಸ್: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಭಾರತ ಮತ್ತೆ ಬೆವರಿಳಿಸಿದೆ. ವಿಶ್ವದಲ್ಲಿಯೇ ಅತೀ ಹೆಚ್ಚು ಉಗ್ರರನ್ನು ಉತ್ಪಾದಿಸುವ ಹಾಗೂ ರಪ್ತು ಮಾಡುವ ದೇಶವೆಂದು ವಾಗ್ದಾಳಿ ನಡೆಸಿತು. ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ನಡೆದ 40ನೇ ಯುನೆಸ್ಕೋ ಸಾಮಾನ್ಯ ಅಧಿವೇಶನದಲ್ಲಿ ಭಾರತ ಪರ ಪ್ರತಿನಿಧಿಸಿದ ಅಧಿಕಾರಿಗಳು ವಾಗ್ದಾಳಿ ನಡೆಸಿದ್ರು.

ವಿಶ್ವಸಂಸ್ಥೆಯಿಂದ ಕುಖ್ಯಾತ ಭಯೋತ್ಪಾದಕರೆಂದು ಗುರುತಿಸಲ್ಪಟ್ಟ 130ಕ್ಕೂ ಹೆಚ್ಚು ಉಗ್ರರು ಮತ್ತು 25 ಉಗ್ರಗಾಮಿ ಸಂಘಟನೆಗಳಿಗೆ ಆಶ್ರಯ ನೀಡಿದ ದೇಶ ಯಾವುದು ಎಂದು ಕೇಳುವ ಮೂಲಕ, ಪಾಕ್ ವಿರುದ್ಧ ಕಿಡಿ ಕಾರಲಾಯ್ತು. ಅಲ್ದೇ, 370ನೇ ವಿಧಿ ರದ್ದತಿ ಬಗ್ಗೆ ಪ್ರಶ್ನೆ ಮಾಡಿರುವ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಲಾಯ್ತು. ನಮ್ಮ ಆಂತರಿಕ ವಿಚಾರದಲ್ಲಿ ಪಾಕಿಸ್ತಾನ ಮೂಗುತೂರಿಸುವ ಹಕ್ಕಿಲ್ಲವೆಂದು ಹೇಳಲಾಯ್ತು.

ನಮ್ಮದು ಸರ್ವಧರ್ಮಗಳನ್ನ ಗೌರವಿಸುವ ದೇಶ. ನಾವು ಮಾನವೀಯತೆ ಹಾಗೂ ಎಲ್ಲ ಧರ್ಮವನ್ನ ಪ್ರೀತಿಸುತ್ತೇವೆ. ಬೇರೆ ರಾಷ್ಟ್ರದ ರೀತಿ ಭಯೋತ್ಪಾದಕರಿಗೆ ರಾಜಮರ್ಯಾದೆ ನೀಡುವುದಿಲ್ಲವೆಂದು ಹೇಳುವ ಮೂಲಕ ಪಾಕ್ ವಿರುದ್ಧ ವಾಗ್ದಾಳಿ ನಡೆಸಲಾಯ್ತು.

ಓದುಗರ ಗಮನಕ್ಕೆ




Leave a Reply

Your email address will not be published. Required fields are marked *

error: Content is protected !!