ಕಾಜಿರಂಗ ಉದ್ಯಾನದಲ್ಲಿ ಪ್ರಧಾನಿ ಸಫಾರಿ

62

ಪ್ರಜಾಸ್ತ್ರ ಸುದ್ದಿ

ಅಸ್ಸಾಂ: ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಪ್ರಧಾನಿ ಮೋದಿ ಶನಿವಾರ ಸಫಾರಿ ನಡೆಸಿದರು. ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಅಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶಕ್ಕೆ ಇಂದು ಭೇಟಿ ನೀಡುತ್ತಿದ್ದಾರೆ.

ಯುನೆಸ್ಕೋ ವಿಶ್ವ ಪರಂಪರೆಯ ತಾಣದಲ್ಲಿ ಸ್ಥಳ ಪಡೆದಿರುವ ಕಾಜಿರಂಗ ಉದ್ಯಾನದಲ್ಲಿ ಆನೆ ಸಫಾರಿ ಹಾಗೂ ಜೀಪ್ ಸಫಾರಿ ನಡೆಸಿದರು. ಈ ವೇಳೆ ಹಿರಿಯ ಅರಣ್ಯಾಧಿಕಾರಿಗಳು, ಉದ್ಯಾನದ ನಿರ್ದೇಶಕಿ ಸೋನಾಲಿ ಘೋಷ್ ಇದ್ದರು.

ಕಾಜಿರಂಗದಲ್ಲಿ ಕೊಂಬಿನ ಘೇಂಡಾಮೃಗಗಳು, ಆನೆ, ಜೌಗು ಜಿಂಕೆ, ನೀರಿನ ಎಮ್ಮೆಗಳಿಗೆ ಪ್ರಸಿದ್ಧಿ ಪಡೆದಿದೆ. ಇಲ್ಲಿ ಹುಲಿಗಳ ಸಂಖ್ಯೆಯೂ ಹೆಚ್ಚಿದ್ದು, 2006ರಲ್ಲಿ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!