ಪ್ರಜಾಸ್ತ್ರ ಫಲಶ್ರುತಿ: ನಡುರಸ್ತೆ ಬಿಟ್ಟ ಸಿಂದಗಿ ಕುರಿಸಂತೆ

372

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದಲ್ಲಿ ಎಪಿಎಂಸಿಯಲ್ಲಿ ಪ್ರತಿ ವಾರ ಕುರಿಸಂತೆ ನಡೆದುಕೊಂಡು ಬರುತ್ತಿದೆ. ದಿನಗಳು ಕಳೆದಂತೆ ವಾರದ ಕುರಿಸಂತೆ ನಡು ರಸ್ತೆಗೆ ಬಂದು ಬಿಟ್ಟುತ್ತು. ಇದರಿಂದಾಗಿ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತಿತ್ತು. ಆವರಣದಲ್ಲಿ ವಿಶಾಲವಾದ ಜಾಗವಿದ್ದರೂ ರೋಡ್ ಮಧ್ಯಕ್ಕೆ ಕುರಿಸಂತೆ ನಡೆಯುತಿತ್ತು. ಈ ಬಗ್ಗೆ ‘ಪ್ರಜಾಸ್ತ್ರ’ ಸುದ್ದಿ ಪ್ರಕಟಿಸುತ್ತು.

ಈಗ ಸುದ್ದಿಯಿಂದ ಎಚ್ಚೆತ್ತುಕೊಂಡಿರುವ ಎಪಿಎಂಸಿ ಅಧಿಕಾರಿಗಳು, ಅಧ್ಯಕ್ಷರು ವಾರದ ಕುರಿಸಂತೆಯನ್ನು ನಡು ರಸ್ತೆಯಿಂದ ಆವರಣಕ್ಕೆ ಸ್ಥಳಾಂತರಿಸಿದ್ದಾರೆ. ಸುಮಾರು ನಾಲ್ಕೈದು ಗಂಟೆಗಳ ಕಾಲ ನಡೆಯುವ ಕುರಿಸಂತೆಯಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಅದು ರಸ್ತೆಗೆ ಬಂದರೆ ಹೇಗೆ ಅನ್ನೋ ಕುರಿತು ಸುದ್ದಿಗೆ ಸ್ಪಂದಿಸಿದ್ದು, ಜನರಿಗೆ ಖುಷಿಯಾಗಿದೆ.

ರೈತರಿಗಾಗಿ ಇರುವ ಎಪಿಎಂಸಿ, ಅವರ ವಾರದ ಕುರಿಸಂತೆಗೆ ಯಾಕೆ ಸರಿಯಾದ ವ್ಯವಸ್ಥೆ ಮಾಡುತ್ತಿಲ್ಲವೆಂದು ಪ್ರಶ್ನಿಸಲಾಗಿತ್ತು. ಸಧ್ಯಕ್ಕೆ ಒಂದು ಹಂತದ ಪರಿಹಾರ ಸಿಕ್ಕಿದೆ. ಆದರೆ, ಮತ್ತೆ ನಡುರಸ್ತೆಗೆ ಕುರಿಸಂತೆ ಬರಬಾರದು. ಈ ಬಗ್ಗೆ ಎಲ್ಲರೂ ಗಮನ ಹರಿಸಬೇಕಿದೆ. ವ್ಯಾಪಾರಿಗಳು ಸಹ ರಸ್ತೆಯ ಮಧ್ಯಕ್ಕೆ ಬರದೆ ಎಪಿಎಂಸಿ ಆವರಣದೊಳಗೆ ಸಂತೆ ಮಾಡಿಕೊಂಡರೆ ಎಲ್ಲರಿಗೂ ಒಳ್ಳೆಯದು.




Leave a Reply

Your email address will not be published. Required fields are marked *

error: Content is protected !!