ಇಂಡಿಯ ಲಚ್ಯಾಣ ಗ್ರಾಮ ಸೀಲ್ ಡೌನ್

548

ಪ್ರಜಾಸ್ತ್ರ ಸುದ್ದಿ

ಇಂಡಿ: ಡೆಡ್ಲಿ ಕರೋನಾ ಇದೀಗ ವಿಜಯಪುರ ನಗರದಿಂದ ತಾಲೂಕು, ಗ್ರಾಮಗಳತ್ತ ಮುಖ ಮಾಡಿದೆ. ಹೀಗಾಗಿ ತಾಲೂಕು, ಗ್ರಾಮಗಳ ಜನರಲ್ಲಿ ಆತಂಕ ಮನೆ ಮಾಡಿದೆ. ಇದೀಗ ಲಚ್ಯಾಣ ಗ್ರಾಮ ಸೀಲ್ ಡೌನ್ ಮಾಡಲಾಗ್ತಿದೆ.

ಇಂಡಿ ತಾಲೂಕಿನ ಅರಖೇಡದಲ್ಲಿ ಕರೋನಾ ಸೋಂಕು ದೃಢಪಟ್ಟಿದ್ದು, ಪಕ್ಕದ ಗ್ರಾಮವಾದ ಲಚ್ಯಾಣವನ್ನ ಇಂದು ಸಂಜೆ 7 ಗಂಟೆಯಿಂದ ಜೂನ್ 1ರ ವರೆಗೆ ಸಂಪೂರ್ಣ ಬಂದ್ ಮಾಡಲಾಗ್ತಿದೆ ಎಂದು ಗ್ರಾಮ ಪಂಚಾಯ್ತಿ ಪ್ರಕಟಣೆ ಹೊರಡಿಸಿದೆ.

6 ದಿನಗಳ ಕಾಲ ಲಚ್ಯಾಣ ಬಂದ್ ಮಾಡಲಾಗ್ತಿದ್ದು, ಈ ವೇಳೆ ಆರೋಗ್ಯ ಸೇವೆ ಮಾತ್ರ ಲಭ್ಯವಿರಲಿದೆ. ಪಕ್ಕದ ಗ್ರಾಮಕ್ಕೆ ಕರೋನಾ ಎಂಟ್ರಿಯಾಗಿರುವುದ್ರಿಂದ, ಮುಂಜಾಗ್ರತ ಕ್ರಮವಾಗಿ ಸೀಲ್ ಡೌನ್ ಮಾಡಲಾಗ್ತಿದೆ. ವೈದ್ಯಕೀಯ ಸೇವೆ ಹೊರತು ಪಡಿಸಿ, ಹೊಟೇಲ್, ಅಂಗಡಿ-ಮುಂಗಟ್ಟು, ಇತರೆ ಚಟುವಟಿಕೆಗಳು ಬಂದ್ ಮಾಡಲು ಆದೇಶಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!