ಹುತಾತ್ಮ ಯೋಧ ಸಾಯಿತೇಜ್ ಕುಟುಂಬಕ್ಕೆ 50 ಲಕ್ಷ ಪರಿಹಾರ

198

ಪ್ರಜಾಸ್ತ್ರ ಸುದ್ದಿ

ವಿಜಯವಾಡ: ಡಿಸೆಂಬರ್ 8ರಂದು ತಮಿಳುನಾಡಿನ ನೀಲಗಿರ ಬೆಟ್ಟದಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡು ಸಿಡಿಎಸ್ ಬಿಪಿನ್ ರಾವತ್ ಸೇರಿ 13 ಸೇನಾಧಿಕಾರಿಗಳು ಹುತಾತ್ಮರಾಗಿದ್ದಾರೆ. ಅದರಲ್ಲಿ ಆಂಧ್ರಪ್ರದೇಶದ ಲ್ಯಾನ್ಸ್ ನಾಯ್ಕ ಸಾಯಿತೇಜ್ ಕೂಡಾ ಒಬ್ಬರು. ಅವರ ಕುಟುಂಬಕ್ಕೆ ಆಂಧ್ರ ಸರ್ಕಾರ 50 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪೆದ್ದಿರೆಡ್ಡಿ ರಾಮಚಂದ್ರ ಶನಿವಾರ ಪರಿಹಾರ ಘೋಷಣೆ ಮಾಡಿದ್ದಾರೆ. ಸಾಯಿತೇಜ್ ಕುಟುಂಬವನ್ನು ಭೇಟಿ ಮಾಡಿ ಪರಿಹಾರದ ಚೆಕ್ ವಿತರಣೆ ಮಾಡಲಿದ್ದಾರೆ. ಇನ್ನು ಮಿಲಿಟರಿ ಶಿಷ್ಟಾಚಾರದಂತೆ ಶನಿವಾರ ಸಾಯಿತೇಜ್ ಪಾರ್ಥಿವ ಶರೀರವನ್ನು ಚಿತ್ತೂರು ಜಿಲ್ಲೆಯ ರೆಗಡಿಪಲ್ಲೇಗೆ ಕಳುಹಿಸಲಾಗಿದೆ.

ಕೇವಲ 27 ವರ್ಷದ ಸಾಯಿತೇಜ್ ಪತ್ನಿ ಹಾಗೂ ಪುಟ್ಟ ಮಗು ಹಾಗೂ ಹೆತ್ತವರನ್ನು ಅಗಲಿದ್ದಾರೆ. ಇದೀಗ ಇಡೀ ಊರಿನಲ್ಲಿ ನೀರವಮೌನ ಆವರಿಸಿಕೊಂಡಿದೆ.




Leave a Reply

Your email address will not be published. Required fields are marked *

error: Content is protected !!