ಪಿಎಂವೈಯು ಮನೆಗಳನ್ನು ಹಸ್ತಾಂತರಿಸಿದ ಪ್ರಧಾನಿ

94

ಪ್ರಜಾಸ್ತ್ರ ಸುದ್ದಿ

ಸೋಲಾಪುರ: ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿರುವ ಮನೆಗಳನ್ನು ಫಲಾನುಭವಿಗಳಿಗೆ ಪ್ರಧಾನಿ ಮೋದಿ ಶುಕ್ರವಾರ ಹಸ್ತಾಂತರಿಸಿದರು. ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ರಾಯನಗರ ಹೌಸಿಂಗ್ ಸೊಸೈಟಿ ನಿರ್ಮಿಸಿರುವ 15,204 ಮನೆಗಳನ್ನು ಪ್ರಧಾನಿ ಹಸ್ತಾಂತರಿಸಿದರು.

ಪಿಎಂವೈಯು ಯೋಜನೆ ಅಡಿಯಲ್ಲಿ ಸೋಲಾಪುರದಲ್ಲಿ ಒಟ್ಟು 90 ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ. ಈ ವೇಳೆ ರಾಜ್ಯಪಾಲ ರಮೇಶ್ ಬೈಸ್, ಮುಖ್ಯಮಂತ್ರಿ ಏಕನಾಥ ಶಿಂಧೆ, ಉಪ ಮುಖ್ಯಮಂತ್ರಿಗಳಾದ ಫಡ್ನಾವಿಸ್, ಅಜಿತ್ ಪವಾರ್ ಸೇರಿ ಇತರರಿದ್ದರು.




Leave a Reply

Your email address will not be published. Required fields are marked *

error: Content is protected !!