ವಕೀಲರ ಮೇಲೆ ಪಿಎಸ್ಐ ಹಲ್ಲೆ ಖಂಡಿಸಿ ಪ್ರತಿಭಟನೆ

469

ಸಿಂದಗಿ: ಸಿಂದಗಿ ನ್ಯಾಯಾಲಯದಲ್ಲಿ ವಕೀಲರಾಗಿರುವ ಎಂ.ಬಿ ಅಂಗಡಿ ಎಂಬುವರ ಮೇಲೆ ದೇವರಹಿಪ್ಪರಗಿ ಪಿಎಸ್ಐ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ, ವಕೀಲರ ಸಂಘದಿಂದ ಪ್ರತಿಭಟನೆ ನಡೆಸಲಾಯ್ತು.

ಕೋರ್ಟ್ ಬಳಿ ಪ್ರತಿಭಟನೆ ನಡೆಸಿದ ತಾಲೂಕು ವಕೀಲರ ಸಂಘ, ಬಳಿಕ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿತು. ವಕೀಲರಾದ ಎಂ.ಬಿ ಅಂಗಡಿ ಅವರ ಮೇಲೆ ಹಲ್ಲೆ ಮಾಡಿದ ಪಿಎಸ್ಐ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯ್ತು.

ತಾಲೂಕಿನ ಇಬ್ರಾಹಿಂಪೂರ ಗ್ರಾಮದವರಾದ ಎಂ.ಬಿ ಅಂಗಡಿ ಅವರು, ಭಾನುವಾರ ಸಾಯಂಕಾಲ ಗ್ರಾಮದ ಹನುಮಂತ ದೇವರ ಗುಡಿಯ ಕಟ್ಟಿಯ ಮೇಲೆ ಕುಳಿತಿದ್ದಾರೆ. ಆಗ 8 ಜನ ಪೊಲೀಸ್ರು ಅಲ್ಲಿಗೆ ಆಗಮಿಸಿ, ಕಟ್ಟಿಯ ಮೇಲೆ ಕುಳಿತಿರುವವರನ್ನ ಜೂಜಾಟವಾಡ್ತಿದ್ದಾರೆಂದು ಬಂಧಿಸಿದ್ರು. ಆಗ ವಕೀಲರಾದ ಎಂ.ಬಿ ಅಂಗಡಿ ಅವರು ಮನೆಗೆ ಹೋಗುವ ಟೈಂನಲ್ಲಿ ಪೇದೆಯೊಬ್ಬರು ಅವರನ್ನ ಹಿಡಿದು ಎಳೆದಾಡಿ ಅವಾಚ್ಯವಾಗಿ ಬೈಯುತ್ತಿದ್ದಾಗ, ಪಿಎಸ್ಐ ಬಂದು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ದೇ ಅವರನ್ನ ಬಂಧಿಸಿ ಅಕ್ರಮವಾಗಿ ಜೈಲಿನಲ್ಲಿಟ್ಟಿದ್ರಂತೆ. ಬಳಿಕ ರಾತ್ರಿ 11 ಗಂಟೆಗೆ ಬಿಟ್ಟು ಕಳುಹಿಸಲಾಗಿದೆ ಅಂತಾ ಹೇಳಿದ್ದಾರೆ.

ವಕೀಲರ ಮೇಲೆ ನಡೆದ ಹಲ್ಲೆಯನ್ನ ಖಂಡಿಸಿ ತಾಲೂಕು ವಕೀಲರ ಸಂಘದಿಂದ ಪ್ರತಿಭಟನೆ ನಡೆಸಿ, ಕೋರ್ಟ್ ಕಲಾಪಗಳನ್ನ ಬಹಿಷ್ಕರಿಸಿದ್ದಾರೆ. ಅಲ್ದೇ, ತಮ್ಗೆ ನ್ಯಾಯ ಸಿಗುವ ತನಕ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ. ಹೀಗಾಗಿ ನಾಳೆ ಜಿಲ್ಲಾದ್ಯಂತ ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ ಎಂತಾ ಹೇಳಲಾಗ್ತಿದೆ.


TAG


Leave a Reply

Your email address will not be published. Required fields are marked *

error: Content is protected !!