ಸ್ಥಳೀಯ ಎಲೆಕ್ಷನ್: ರಾಜ್ಯದಲ್ಲಿ ಬಿಜೆಪಿಗೆ ಮುಖಭಂಗ

415

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದ ತುಂಬಾ ಇಂದು ಸ್ಥಳೀಯ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಿದೆ. ನಗರಸಭೆ, ಪಟ್ಟಣ ಪಂಚಾಯ್ತಿ, ಗ್ರಾಮ ಪಂಚಾಯ್ತಿಯ ಖಾಲಿ ಇರುವ ಸ್ಥಾನಗಳಿಗೆ ಡಿಸೆಂಬರ್ 27ರಂದು ಮತದಾನ ನಡೆದಿದೆ.

ಈಗಾಗ್ಲೇ ಬಹುತೇಕ ಪಟ್ಟಣ ಪಂಚಾಯ್ತಿಯ ಫಲಿತಾಂಶ ಪ್ರಕಟಗೊಂಡಿದೆ. ಎಲ್ಲೆಡೆ ಕಾಂಗ್ರೆಸ್, ಪಕ್ಷೇತರರು ಹಾಗೂ ಜೆಡಿಎಸ್ ಪ್ರಾಬಲ್ಯ ಸಾಧಿಸಿವೆ. ಆಡಳಿತರೂಢ ಪಕ್ಷ ಬಿಜೆಪಿ ಹೇಳಿಕೊಳ್ಳುವಷ್ಟು ಸ್ಥಾನಗಳಲ್ಲಿ ಜಯ ಸಾಧಿಸಿಲ್ಲ. ಹೀಗಾಗಿ ಪರಿಷತ್ ಚುನಾವಣೆ ನಂತರ ಸ್ಥಳೀಯ ಚುನಾವಣೆಯಲ್ಲೂ ಬಿಜೆಪಿಗೆ ಹಿನ್ನೆಡೆಯಾಗಿದೆ.

ಇನ್ನು ಗ್ರಾಮ‌ ಪಂಚಾಯ್ತಿ ಚುನಾವಣೆಯ ಮತ ಎಣಿಕೆ ಕಾರ್ಯ ನಡೆದಿದೆ. ಸಂಜೆಯ ವೇಳೆಗೆ ಸ್ಪಷ್ಟ‌ ಚಿತ್ರಣ ಸಿಗಲಿದೆ. ಇಲ್ಲಿ ಯಾವ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಗೆಲುವು ಸಾಧಿಸಿದ್ದಾರೆ ಅನ್ನೋದು ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!