ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲೂ ಬಿಜೆಪಿಗೆ ಭಾರಿ ಹಿನ್ನೆಡೆಯಾಗಿದೆ. ಇದೀಗ ಸ್ಥಳೀಯ 58 ಸ್ಥಾನಗಳಲ್ಲೂ ಬಿಜೆಪಿಗೆ ಹಿನ್ನಡೆಯಾಗಿದೆ.
ಅರಬಾವಿಯ 16 ಸ್ಥಾನಗಳಲ್ಲಿ 11 ಸ್ಥಾನ ಪಕ್ಷೇತರ ಪಾಲಾಗಿದೆ. 5 ಬಿಜೆಪಿ ಗೆದ್ದಿದೆ. ಕತ್ಲೊಳಿ ಪಟ್ಟಣ ಪಂಚಾಯ್ತಿಯಲ್ಲಿ 11 ಪಕ್ಷೇತರರು ಗೆದ್ದು ಬೀಗಿದ್ದಾರೆ. ಉಗಾರ್ ಖರ್ದ್ ಪುರಸಭೆಯ 23 ವಾರ್ಡ್ ಗಳಲ್ಲಿ ಕಾಂಗ್ರೆಸ್ 11ರಲ್ಲಿ ಗೆಲುವು ಸಾಧಿಸಿದೆ.
ನಿಪ್ಪಾಣಿ ಕ್ಷೇತ್ರ ಪಕ್ಷೇತರ ಪಾಲಾಗಿದೆ. ಯಕ್ಸಾಬಾ ಪಟ್ಟಣ ಪಂಚಾಯ್ತಿ ಕಾಂಗ್ರೆಸ್ ಪಾಲಾಗಿದೆ. ಐನಾಪುರ ಕಾಂಗ್ರೆಸ್, ಬೋರಗಾಂವ ಅತಂತ್ರ ಹಾಗೂ ಶೇಡಬಾಳ ಬಿಜೆಪಿ ಪಾಲಾಗಿದೆ. ಈ ಮೂಲಕ ಪರಿಷತ್ ಫೈಟ್ ನಂತರ ಸ್ಥಳೀಯ ಚುನಾವಣೆಯಲ್ಲೂ ಬಿಜೆಪಿಗೆ ಹಿನ್ನೆಡೆಯಾಗಿದೆ.