ಅರೆಕಾಲಿಕ ಬೋಧಕ ಸಿಬ್ಬಂದಿಯ ಲಾಕ್ ಡೌನ್ ಕಥೆ

365

ಅರೆಕಾಲಿಕ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಗೋಳು ಕೇಳುವವರಾರು. ಲಾಕ್ ಡೌನ್ ಜಾರಿಯದಾಗಿನಿಂದ ಹಿಡಿದು ಇಲ್ಲಿಯವರೆಗೆ ಖಾಸಗಿ ಶಾಲಾ, ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಜೀವನ ಚಿಂತಾಜನಕವಾಗಿದೆ. ಎಲ್ಲೆಡೆ ಕಾರ್ಮಿಕ ವರ್ಗ, ರೈತಾಪಿ ವರ್ಗ, ವ್ಯಾಪಾರಿಗಳ ಬಗ್ಗೆ ಚಿಂತನೆಗಳು ನಡದಿವೆ ವಿನಃ ಶಿಕ್ಷಣ ಪಡೆದುಕೊಂಡು ತರಬೇತಿ ಪೂರ್ಣಗೊಳಿಸಿ ಅತ್ತ ಉದ್ಯೋಗವೂ ಇಲ್ಲ ಇತ್ತ ನಿರುದ್ಯೋಗವೂ ಅಲ್ಲ ಎಂಬಂತಾಗಿದೆ ಖಾಸಗಿ ವಲಯದಲ್ಲಿ ಕೆಲಸ ಮಾಡುವವರು ಗೋಳು. 

ಅದೆಷ್ಟೋ ಖಾಸಗಿ ವಲಯದಲ್ಲಿ ಕೆಲಸ ಮಾಡುವ ಸಿಬ್ಬಂದಿ ಮನೆಯಲ್ಲಿಯೇ ಇರುವುದರಲ್ಲೇ ಖರ್ಚು ಮಾಡಿ ತಮ್ಮ ಜೀವನ ಸಾಗಿಸುವ ಪ್ರಮೇಯ ಉಂಟಾಗಿದೆ. ಇಷ್ಟಾದರೂ ಅವರು ಯಾರ್ ಮುಂದೆಯೂ ಬೇಡಿಕೆಯು ಇಟ್ಟಿಲ್ಲ. ಅದಕ್ಕೆ ಕಾರಣ ಹಿಂಜರಿಕೆ, ಭಯ ಮತ್ತು ಸಂಘಟನೆಯ ಕೊರತೆ. ರಾಜ್ಯದಲ್ಲಿ ಸುಮಾರು 3 ರಿಂದ 4 ಲಕ್ಷ ಸಿಬ್ಬಂದಿ ಅನುದಾನ ರಹಿತ ಶಾಲಾ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿರುತಿದ್ದಾರೆ 

ಲಾಕ್ ಡೌನ್ ಕ್ಕಿಂತಲೂ ಮೊದಲು ಅವರು ಪಡೆದುಕೊಳ್ಳುತ್ತಿರುವ ಸಂಬಳ ಸುಮಾರು 5 ರಿಂದ 10 ಸಾವಿರ ಇರಬಹುದು. ಅದನ್ನು ಲೆಕ್ಕಾಚಾರ ಹಾಕಿದಾಗ ದಿನಕ್ಕೆ 150 ರಿಂದ 200ರೂಪಾಯಿ. ಅದರ ಮಧ್ಯದಲ್ಲಿ ಕೆಲವು ಖಾಸಗಿ ಶಾಲಾ ಕಾಲೇಜುಗಳಲ್ಲಿ ವರ್ಷದಲ್ಲಿ 2 ರಿಂದ 3 ತಿಂಗಳು ಸಂಬಳವೇ ನೀಡುವುದಿಲ್ಲ. ಅದು ಲಾಕ್ ಡೌನ್ ಸಂದರ್ಭದಲ್ಲಿ ಬೋಧಕ ವರ್ಗದ ಸ್ಥಿತಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಇನ್ನು ಖಾಸಗಿ ಶಾಲಾ ಕಾಲೇಜುಗಳು ಆಗಷ್ಟವರೆಗೂ ಪ್ರಾರಂಭವಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಒಂದು ವೇಳೆ ಪ್ರಾರಂಭವಾದರೂ ಸಂಸ್ಥೆಯು ಮೂಲ ವಿದ್ಯಾರ್ಥಿಗಳ ಶುಲ್ಕ ಪಾವತಿ ಮಾಡಿದರೆ ಸಂಬಳ. ಇಲ್ಲಿ ಪಾಲಕರ ಸಂಕಷ್ಟವು ಸಹ ಇದೆ. ಹೀಗಾಗಿ ಅವರು ಕಟ್ಟುವಲ್ಲಿ ವಿಳಂಬ ಮಾಡಿದರೆ ಬೋಧಕ ಸಿಬ್ಬಂದಿ ಸಂಬಳವಿಲ್ಲದೆ 4 ರಿಂದ 5 ತಿಂಗಳು ದುಡಿಯುವ ಸಮಯ ಎದುರಾಗಬಹುದು. ಇಂತಹ ಸಂದರ್ಭದಲ್ಲಿ ಶಿಕ್ಷಕರ ಕ್ಷೇತ್ರ, ಪದವೀಧರ ಕ್ಷೇತ್ರದಿಂದ ಪ್ರತಿನಿಧಿಸುವ ಜನಪ್ರತಿನಿಧಿಗಳಿಗೆ, ಶಿಕ್ಷಣ ತಜ್ಞರಿಗೆ ಅರೆಕಾಲಿಕ ಬೋಧಕ ಸಿಬ್ಬಂದಿ ಗೋಳು ಕಾಣದಿರುವುದು ದುರದೃಷ್ಟಕರ.

ಮಾನ್ಯ ಮುಖ್ಯಮಂತ್ರಿಗಳೇ, ಶಿಕ್ಷಣ ಸಚಿವರೇ, ಖಾಸಗಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರೇ ಕೇಳಿ ಇಲ್ಲಿ. ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರಿಗೆ ಲಾಕ್ ಡೌನ್ ಸಂದರ್ಭದಲ್ಲಿ ಮಾಸಿಕ ಸಂಬಳದ ಅರ್ಧಭಾಗ ವೇತನ ಹಾಗೂ ಜೀವನಾವಶ್ಯಕ ಸಾಮಗ್ರಿಗಳನ್ನು ಇನ್ನಾದರೂ ವಿತರಣೆ ಮಾಡುವ ಕಡೆಗೆ ಗಮನ ಹರಿಸಲಿ ಅನ್ನೋದು ಸಂಕಷ್ಟದಲ್ಲಿರುವ ಎಲ್ಲಾ ಖಾಸಗಿ ಶಾಲಾ ಕಾಲೇಜುಗಳ ಸಿಬ್ಬಂದಿ ಪರವಾಗಿ ನನ್ನದೊಂದು ಮನವಿ.

ಮಾಹಾಂತೇಶ ಎನ್ ನೂಲಾನವರ ಉಪನ್ಯಾಸಕರು, ಸಿಂದಗಿ 





Leave a Reply

Your email address will not be published. Required fields are marked *

error: Content is protected !!