ಗುಮ್ಮಟನಗರಿಯಲ್ಲಿ 29 ಜನ ಗುಣಮುಖ

323

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲೆಯಲ್ಲಿ ಇದೀಗ 29 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಜೂನ್ 8ರಂದು ಒಟ್ಟು 29 ಜನ ಗುಣಮುಖರಾಗಿದ್ದು, ಅವರೆಲ್ಲರನ್ನ ಜಿಲ್ಲಾಸ್ಪತ್ರೆಯಿಂದ ಬೀಳ್ಕೊಡಲಾಯ್ತು. ಇದರೊಂದಿಗೆ 108 ಜನ ಗುಣಮುಖರಾಗಿದ್ದಾರೆ.

ಜಿಲ್ಲಾಸ್ಪತ್ರೆಯಿಂದ ರೋಗಿ ಸಂಖ್ಯೆ 2206 (50 ವರ್ಷದ ಪುರುಷ), 2712 (23 ವರ್ಷದ ಯುವಕ), 2839 (37 ವರ್ಷದ ಮಹಿಳೆ) 2928 (38 ವರ್ಷದ ಪುರುಷ), 2929(30 ವರ್ಷದ ಪುರುಷ), 3178 (29 ವರ್ಷದ ಯುವಕ) 3152 (50 ವರ್ಷದ ಪುರುಷ) 4808 (24 ವರ್ಷದ ಯುವತಿ), 3181 (4 ವರ್ಷದ ಬಾಲಕಿ) 3172 (59 ವರ್ಷದ ಪುರುಷ) 4579 (12 ವರ್ಷದ ಬಾಲಕ) 4580 (21 ವರ್ಷದ ಯುವಕ) ಬಿಡುಗಡೆ ಹೊಂದಿದ್ದಾರೆ.

ಅದರಂತೆ ರೋಗಿ ಸಂಖ್ಯೆ 3174 (5 ವರ್ಷದ ಬಾಲಕ), 4582 (28 ವರ್ಷದ ಯುವತಿ), 4583 (50 ವರ್ಷದ ಪುರುಷ) 4584 (8 ವರ್ಷದ ಬಾಲಕಿ), 4585 (35 ವರ್ಷದ ಮಹಿಳೆ), 4587 (24 ವರ್ಷದ ಯುವಕ) 4588 (28 ವರ್ಷದ ಯುವಕ) 4589 (16 ವರ್ಷದ ಯುವತಿ), 4590 (23 ವರ್ಷದ ಯುವತಿ) 4591 (9 ವರ್ಷದ ಬಾಲಕಿ) 4592 (27 ವರ್ಷದ ಯುವತಿ) 4593 (16 ವರ್ಷದ ಯುವಕ), 4594 (23 ವರ್ಷದ ಯುವಕ), 4595 (30 ವರ್ಷದ ಯುವಕ) 4596 (35 ವರ್ಷದ ಯುವಕ), 4597(35 ವರ್ಷದ ಮಹಿಳೆ), 4601 (39 ವರ್ಷದ ಪುರುಷ) ಆಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 202 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಯಲ್ಲಿ 88 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಈವರೆಗೆ ಒಟ್ಟು 6 ಜನ ಕೋವಿಡ್-19 ರೋಗಿಗಳು ಮೃತಪಟ್ಟಿದ್ದಾರೆ. ಇದುವರೆಗೂ 26,358 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿದ್ದು, 25,730 ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ 426 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!