ಲಾಕ್ ಡೌನ್ ಕಟ್ಟುನಿಟ್ಟಿಗೆ ಮನವಿ

510

ಅಥಣಿ: ತಾಲೂಕಿನಲ್ಲಿ ಮೊದಲಿನಂತೆ ಲಾಕ್ ಡೌನ್ ಕಟ್ಟು ನಿಟ್ಟಾಗಿ ಮುಂದುವರೆಸಬೇಕೆಂದು, ತಾಲೂಕಿನ ಪ್ರಜಾ ಪರಿವರ್ತನ ಫೌಂಡೇಷನ್ ವತಿಯಿಂದ ಮನವಿ ಮಾಡಲಾಗಿದೆ.

ಕರೋನಾ ವೈರಸ್‌ ದೇಶದ ಉದ್ದಗಲಕ್ಕೂ ವ್ಯಾಪಿಸಿದ್ದು, ಮಹಾರಾಷ್ಟ್ರದ ಮಿರಜ, ಸಾಂಗಲಿ, ಕವಟೆಮಹಾಕಾಳ, ಜತ್ತ ಪ್ರದೇಶಗಳು ಅಥಣಿ ಮತ್ತು ಕಾಗವಾಡ ತಾಲೂಕುಗಳಿಗೆ ಗಡಿಯನ್ನ ಹೊಂದಿಕೊಂಡಿವೆ. ಈ ಭಾಗದ ಜನರು ಅಡ್ಡದಾರಿಗಳ ಮುಖಾಂತರ ಬರುತ್ತಿದ್ದಾರೆ.

ಪಕ್ಕದ ಜಿಲ್ಲೆಗಳಾದ ಬಾಗಲಕೋಟ, ವಿಜಯಪುರ ಜಿಲ್ಲೆಯಲ್ಲಿ ಸುಮಾರು ಪ್ರಕರಣಗಳಿದ್ದು, ಅಲ್ಲಿಯ ಜನರು ಕೆಲಸದ ನಿಮಿತ್ಯವಾಗಿ  ಅಥಣಿ ಬರುತ್ತಿದ್ದು. ಹೀಗಾಗಿ ಲಾಕ್ ಡೌನ್ ನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರಕ್ಕೆ ವಿನಂತಿಸಿದ್ದು, ಉಪತಹಶೀಲ್ದಾರ್ ರಾಜು ಬುರ್ಲಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಈ ವೇಳೆ ಚಿದಾನಂದ ಶೇಗುಣಸಿ, ಬಸವರಾಜ ಹಿಪ್ಪರಗಿ, ದೀಪಕ ಬುರ್ಲಿ, ಶ್ರೀಧರ ಶೆಟ್ಟಿ, ಪ್ರಶಾಂತ ಪೂಜಾರಿ, ಪ್ರಕಾಶ ಕುಳ್ಳೊಳ್ಳಿ, ಸಚಿನ ಭೋಸಲೆ, ಸೃಷ್ಟಿ ನರಟ್ಟಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.




Leave a Reply

Your email address will not be published. Required fields are marked *

error: Content is protected !!