ವಿಜಯಪುರದಲ್ಲಿ ನಕಲಿ ಪಾಸ್ ಕೊಡ್ತಿದ್ದವನ ಮೇಲೆ ಕೇಸ್

463

ವಿಜಯಪುರ: ಕರೋನಾ ವೈರಸ್ ನಿಂದಾಗಿ ಲಾಕ್ ಡೌನ್ ಘೋಷಣೆಯಾಗಿದೆ. 144 ಸೆಕ್ಷನ್ ಜಾರಿಯಲ್ಲಿದೆ. ಹೀಗಾಗಿ ಎಲ್ಲವೂ ಬಂದ್ ಇದೆ. ಇದರ ನಡುವೆ ಅಗತ್ಯ ವಸ್ತುಗಳ ಪೂರೈಕೆ, ಸೂಚಿಸದ ಅಂಗಡಿ, ಕೆಲಸದವರಿಗೆ ಸ್ಥಳೀಯ ಆಡಳಿತ ಇಲಾಖೆ ಪಾಸ್ ನೀಡ್ತಿದೆ. ಅದರಂತೆ ನಗರದಲ್ಲಿಯೂ ಪಾಸ್ ನೀಡಲಾಗ್ತಿದೆ. ಇದನ್ನೇ ಒಬ್ಬನು ತನ್ನ ಅಂದರ್ ಬಾಹರ್ ಗೆ ಬಳಸಿಕೊಂಡಿದ್ದಾನೆ.

ವಿಜಯಪುರ ನಗರದಲ್ಲಿ ಅನಧಿಕೃತವಾಗಿ ಪಾಸ್ ತಯಾರಿಸಿ ಕೊಡುತ್ತಿದ್ದ ಆರೋಪಿಯ ಮೇಲೆ ಎಫ್ಐಆರ್ ದಾಖಲಾಗಿದೆ. ಲಾಕಡೌನ್ ವೇಳೆ ನಗರದಲ್ಲಿ ಓಡಾಡಲು ನಕಲಿ ಪಾಸ್ ತಯಾರಿಸಿ ಮಾರಾಟ ಮಾಡುತ್ತಿದ್ದ ಫೋಟೋಗ್ರಾಫರ್ ಸುನೀಲಜಿ ಅಲಿಯಾಸ ಮಾಮಾಶ್ರೀ ಗಾಯಕ್ವಾಡ ಎಂಬಾತನ ಮೇಲೆ ಕೇಸ್ ಆಗಿದೆ.

ಮಹಾನಗರ ಪಾಲಿಕೆ ಹೆಸರಲ್ಲಿ ನಕಲಿ ಸೀಲ್ ಬಳಸಿ, ನಕಲಿ ಸಹಿ ಮಾಡಿ ಪಾಸ್ ಮಾರುತ್ತಿದ್ದ. ಈ ಮೂಲಕ ಹಣ ಗಳಿಕೆ ಮಾಡಿಕೊಳ್ತಿದ್ದ ಸುನೀಲಜಿ ಎಂಬಾತನ ಮೇಲೆ ಪಾಲಿಕೆ ಕಂದಾಯ ಅಧಿಕಾರಿ ಮಹೇಶ ಅವರಿಂದ ಜಲನಗರ ಠಾಣೆಯಲ್ಲಿ ದೂರು ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!