ಲಾಕ್ ಡೌನ್ ಎಫೆಕ್ಟ್: ಉತ್ತರ ಭಾರತಕ್ಕೆ ವರವಾಗಿದ್ದೇಗೆ?

333

ನವದೆಹಲಿ: ಕರೋನಾದಿಂದ ಇಡೀ ದೇಶ ಎರಡನೇ ಹಂತದ ಲಾಕ್ ಡೌನ್ ಪರಿಸ್ಥಿತಿಯಲ್ಲಿದೆ. ಬಹುತೇಕರು ಮನೆಯಲ್ಲಿ ಉಳಿದುಕೊಂಡಿದ್ದಾರೆ. ಎಲ್ಲ ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿವೆ. ಸಂಚಾರ ವ್ಯವಸ್ಥೆ ಬಂದ್ ಆಗಿದೆ. ಇದ್ರಿಂದಾಗಿ ಉತ್ತರ ಭಾರತಕ್ಕೆ ಬಹುದೊಡ್ಡ ವರವಾಗಿದೆ.

ಕೈಗಾರಿಕೆ, ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರ, ಸಾರಿಗೆ ವ್ಯವಸ್ಥೆ ಸೇರಿದಂತೆ ಪರಿಸರದ ಮೇಲಾಗ್ತಿದ್ದ ಮಾಲಿನ್ಯದಲ್ಲಿ ಸಾಕಷ್ಟು ಕಡಿಮೆಯಾಗಿದೆ. ಈ ಮೂಲಕ ಉತ್ತರ ಭಾರತದಲ್ಲಿ ವಾಯು ಮಾಲಿನ್ಯ 20 ವರ್ಷ ಹಿಂದಕ್ಕೆ ಹೋಗಿದೆ. ಈ ಬಗ್ಗೆ ನಾಸಾ ಪ್ರಕಟಿಸಿರುವ ಉಪಗ್ರಹಗಳ ಮಾಹಿತಿಯಿಂದ ತಿಳಿದು ಬಂದಿದೆ.

2016 ರಿಂದ 2020ರ ವರೆಗಿನ ವಾಯು ಮಾಲಿನ್ಯದ ಕುರಿತಾಗಿ ಸೆರೆಹಿಡಿಯಲಾದ ಉಪಗ್ರಹ ಚಿತ್ರಣದ ಮೂಲಕ ಏರೊಸಾಲ್ ಆಪ್ಟಿಕಲ್ ಡೆಪ್ತ್ ದಿಂದ ತಿಳಿದು ಬಂದಿದೆ. ಅಂದ್ರೆ, ಗಾಳಿಯಲ್ಲಿರುವ ಕಣಗಳಿಂದ ಬೆಳಕು ಎಷ್ಟೊಂದು ಹಿರಿಕೊಂಡಿದೆ ಅನ್ನೋದು. ಇನ್ನು ಮಾರ್ಚ್ 27ರಂದು ಉತ್ತರ ಭಾರತದಲ್ಲಿ ಮಳೆಯಾಗಿದ್ರಿಂದ ಕಲುಷಿತ ಕಡಿಮೆಯಾಗಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

ಆದ್ರೆ, ದಕ್ಷಿಣ ಭಾರತದಲ್ಲಿ ಮಾಲಿನ್ಯ ಕಡಿಮೆಯಾಗಿಲ್ಲವೆಂದು ತಿಳಿದು ಬಂದಿದೆ. ವಾತಾವರಣದಲ್ಲಾದ ಬದಲಾವಣೆ, ಕೃಷಿ ವಲಯದಲ್ಲಿ ಉಂಟಾದ ಅಗ್ನಿ ಅನಾಹುತಗಳು ಧೂಳು ಹೆಚ್ಚಿದೆ. ಯಾವ ಕಾರಣಕ್ಕೆ ಏರೊಸೆಲ್ ಹೆಚ್ಚಿದೆ ಅನ್ನೋದು ತಿಳಿದಿಲ್ಲವೆಂದು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!