ಲಾಕ್ ಡೌನ್ ನಲ್ಲಿ ಭಾರತ.. ಕಲ್ಪನೆಗೆ ಸಿಗದಷ್ಟು ಶತಕೋಟ್ಯಾಧಿಪತಿಗಳ ಆದಾಯ ಏರಿಕೆ..!

488

ಪ್ರಜಾಸ್ತ್ರ ವಿಶೇಷ ಸುದ್ದಿ

ನವದೆಹಲಿ: ಕೋವಿಡ್ 19 ಲಾಕ್ ಡೌನ್ ನಿಂದಾಗಿ ಇಡೀ ವಿಶ್ವವೇ ತಲ್ಲಣಿಸಿದೆ. ಭಾರತದಂತಹ ಬೃಹತ್ ರಾಷ್ಟ್ರ ಇದ್ರಿಂದ ಇನ್ನೂ ಹೊರ ಬರಲು ಆಗ್ತಿಲ್ಲ. ಕೋವಿಡ್ ನಿಂದಾಗಿ ಘೋಷಣೆಯಾದ ಲಾಕ್ ಡೌನ್ ಸಂದರ್ಭದಲ್ಲಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡರು. ಇದರ ಜೊತೆಗೆ ಲಕ್ಷಾಂತರು ಜನರು ಸಾವನ್ನಪ್ಪಿದ್ದರು.

ಕಾರ್ಮಿಕರು, ಬಡವರು, ಮಧ್ಯಮ ವರ್ಗದ ಜನರ ಬದುಕು ಅಕ್ಷರಶಃ ಬೀದಿಗೆ ಬಂತು. ಇದೀಗ ಅನ್ ಲಾಕ್ ಆಗಿದ್ರೂ ಬದುಕು ಮೊದಲಿನಷ್ಟು ಸುಧಾರಣೆ ಕಂಡಿಲ್ಲ. ಇದು ಅತಿ ಹೆಚ್ಚಿರುವ ಜನರು ಗೋಳು ಆದರೆ, 100 ಶತಕೋಟ್ಯಾಧಿಪತಿಗಳ ಆದಾಯ ಶೇಕಡ 35ರಷ್ಟು ಹೆಚ್ಚಳವಾಗಿದೆ ಎಂದು ಆಕ್ಸ್ ಫಮ್ ಸಂಸ್ಥೆ ಸ್ವಿರ್ಜರ್ ಲೆಂಡ್ ನ ಡೆವೊಸ್ ನಲ್ಲಿನ ವಿಶ್ವ ಆರ್ಥಿಕ ವೇದಿಕೆಯಲ್ಲಿ ಈ ವರದಿ ಪ್ರಸ್ತಾಪಿಸಿದೆ.

100 ಶತಕೋಟ್ಯಾಧಿಪತಿಗಳ ಆದಾಯದಲ್ಲಿ 138 ಮಿಲಿಯನ್ ಬಡ ಜನರಿಗೆ 94,045 (ಪ್ರತಿಯೊಬ್ಬರಿಗೆ) ರೂಪಾಯಿಯ ಚೆಕ್ ನೀಡಬಹುದಂತೆ. ಏಪ್ರಿಲ್ 2020ರಲ್ಲಿ ಶೇಕಡ 80ರಷ್ಟು ಕುಟುಂಬ ಆದಾಯ ನಷ್ಟ ಅನುಭವಿಸಿವೆ. ಪ್ರತಿ ಗಂಟೆಗೆ 1.7 ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಆದ್ರೆ, 100 ಶತಕೋಟ್ಯಾಧಿಪತಿಗಳ ಆದಾಯ ಶೇಕಡ 35ರಷ್ಟು ಹೆಚ್ಚಳವಾಗಿದೆ.

ಲಾಕ್ ಡೌನ್ ಸಂದರ್ಭದಲ್ಲಿ ರಿಲಾಯನ್ಸ್ ಕಂಪನಿಯ ಮುಕೇಶ ಅಂಬಾನಿಯ 1 ಗಂಟೆಯ ಆದಾಯ ಗಳಿಸಲು ಒಬ್ಬ ವ್ಯಕ್ತಿಗೆ 10 ಸಾವಿರ ವರ್ಷ ಬೇಕು. 1 ಸೆಕೆಂಡ್ ಗೆ ಗಳಿಸಿದ ಆದಾಯ ಗಳಿಸಲು 3 ವರ್ಷಬೇಕಾಗುತ್ತೆ ಎಂದು ವರದಿಯಲ್ಲಿ ತಿಳಿಸಿದೆ. ಹೀಗಾಗಿಯೇ ಇರಬಹುದು ಆಗಸ್ಟ್ ನಲ್ಲಿ ಅಂಬಾನಿ ವಿಶ್ವದ 4ನೇ ಅತಿ ಹೆಚ್ಚು ಶ್ರೀಮಂತ ಎಂದು ಘೋಷಿಸಲಾಗಿರುವುದು.

ದೇಶದ ಮೂಕ್ಕಾಲು ಜನರು ಸಂಕಷ್ಟಕ್ಕೆ ತುತ್ತಾದ್ರೆ ಬೆರಳೆಣಿಕೆಯಷ್ಟು ಜನರ ಆದಾಯ ಶೇಕಡ 35ರಷ್ಟು ಏರಿಕೆಯಾಗಿದೆ ಅನ್ನೋದರ ವರದಿ ನಿಜಕ್ಕೂ ಅಚ್ಚರಿ ಹಾಗೂ ಆತಂಕ ಮೂಡಿಸುತ್ತೆ. ಕರೋನಾ ಬಡವರು, ಮಧ್ಯಮ ವರ್ಗದ ಜನರಿಗೆ ನಿಜಕ್ಕೂ ಶಾಪ ಅನ್ನೋದು ಈ ವರದಿ ನೋಡಿದ್ಮೇಲೆ ನೂರಕ್ಕೆ ನೂರರಷ್ಟು ಸತ್ಯ.




Leave a Reply

Your email address will not be published. Required fields are marked *

error: Content is protected !!