ಸಲಗ ಟೈಟಲ್ ಟ್ರ್ಯಾಕ್ ರಿಲೀಸ್

309

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಬ್ಲ್ಯಾಕ್ ಕೋಬ್ರಾ, ದುನಿಯಾ ವಿಜಯ ನಿರ್ದೇಶನದ ಸಲಗ ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಲಾಗಿದೆ. ಮೊದಲ ಬಾರಿಗೆ ನಿರ್ದೇಶನದ ಕ್ಯಾಪ್ ತೊಟ್ಟಿರುವ ದುನಿಯಾ ವಿಜಯ, ತೆರೆಯ ಮೇಲೆ ಅಬ್ಬರಿಸಲು ಬರ್ತಿದ್ದು, ಅದರ ಝಲಕ್ ಟೈಟಲ್ ಟ್ರ್ಯಾಕ್ ಮೂಲಕ ತೋರಿಸಿದ್ದಾರೆ.

ಬಾಗ್ ಬಾಗ್.. ಪೇಟೆಗೆಲ್ಲ ಟಾಪ್ ಸಲಗ.. ಸಾಲ್ ಹಟ್.. ಬೇಟೆ ಬೇಟೆ ಆಡೋ ಖಡ್ಗ ಅನ್ನೋ ಸಾಲುಗಳಿಂದ ಶುರುವಾಗುವ ಹಾಡು, ಹೀರೋ ಇಮೇಜ್ ಏನು ಅನ್ನೋದು ಹೇಳ್ತಿದೆ. ಯೋಗಿ ಬಿ, ಸಂಜಿತ ಹೆಗ್ಡೆ, ಶರತ ಸಂತೋಷ, ಚರಣರಾಜ ಹಾಗೂ ನಾರಾಯಣ ಶರ್ಮಾ ಈ ಹಾಡನ್ನ ಹಾಡಿದ್ದಾರೆ. ಚರಣರಾಜ ಮ್ಯೂಸಿಕ್, ನಾರಾಯಣ ಶರ್ಮಾ ಸಾಹಿತ್ಯವಿದೆ.

ಇನ್ನು ನಟ ದುನಿಯಾ ವಿಜಯ ಎದುರು ಡಾಲಿ ಖ್ಯಾತಿಯ ಧನಂಜಯ ಪೊಲೀಸ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗ್ಲೇ ಸಾಕಷ್ಟು ಕ್ರೇಜ್ ಕ್ರಿಯೇಟ್ ಮಾಡಿರುವ ಸಲಗ ಇದೀಗ ಟೈಟಲ್ ಟ್ರ್ಯಾಕ್ ಮೂಲಕ ಮತ್ತಷ್ಟು ಸೌಂಡ್ ಮಾಡ್ತಿದೆ. ಶ್ರೀಕಾಂತ ಕೆಪಿ ಬಂಡವಾಳ ಹೂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!