‘ಸಲಗ’ಕ್ಕೆ ಉಪ್ಪಿ ಸಾಥ್

450

ನಟ ದುನಿಯಾ ವಿಜಿ ನಿರ್ದೇಶನ ಮಾಡಿ ಅಭಿನಯಿಸಿರುವ ಸಲಗ ಚಿತ್ರಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್ ನೀಡಿದ್ದಾರೆ. ಸೂರಿ ಅಣ್ಣ ಅನ್ನೋ ಹಾಡು ಈಗಾಗ್ಲೇ ಹಿಟ್ ಆಗಿದೆ. ಇದೀಗ 2ನೇ ಹಾಡು ರಿಲೀಸ್ ಆಗ್ತಿದೆ. ಇದನ್ನ ಉಪ್ಪಿ ರಿಲೀಸ್ ಮಾಡ್ತಿದ್ದಾರೆ.

ಜನವರಿ 20 ದುನಿಯಾ ವಿಜಿ ಹುಟ್ಟು ಹಬ್ಬ. ಹೀಗಾಗಿ ಜನವರಿ 19ರ ಮಧ್ಯರಾತ್ರಿ 20ರ ಬೆಳಗ್ಗೆ 2ನೇ ಹಾಡು ರಿಲೀಸ್ ಆಗ್ತಿದೆ. ಚಿತ್ರದ ಲಿರಿಕಲ್ ಹಾಡನ್ನ ನಟ, ನಿರ್ದೇಶಕ ಉಪೇಂದ್ರ ಬಿಡುಗಡೆ ಮಾಡ್ತಿದ್ದಾರೆ. ಕೆಪಿ ಶ್ರೀಕಾಂತ ನಿರ್ಮಾಣ, ದನಿಯಾ ವಿಜಿ ನಿರ್ದೇಶನವಿದೆ. ಚರಣರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ದುನಿಯಾ ವಿಜಿಗೆ ಸಂಜನಾ ಆನಂದ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಡಾಲಿ ಖ್ಯಾತಿಯ ನಟ ಧನಂಜಯ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಸಲಗ ಮೂವಿ ಈಗಾಗ್ಲೇ ಸಾಕಷ್ಟು ನಿರೀಕ್ಷೆಗಳನ್ನ ಮೂಡಿಸಿದ್ದು ದುನಿಯಾ ವಿಜಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!