ಅಭಿವೃದ್ಧಿ ಮಂತ್ರ ಜಪಿಸಿದ ಮನಗೂಳಿ

459

ಸಿಂದಗಿ: ಕಳೆದ 25 ವರ್ಷಗಳಲ್ಲಿ ಪಟ್ಟಣ ಸಾಕಷ್ಟು ಬೆಳದಿದೆ. 94ರಲ್ಲಿ ನಾನು ಗೆದ್ದು ಬಂದಾಗಿದ್ದ ಪಟ್ಟಣಕ್ಕೂ ಈಗಿನದಕ್ಕೂ ಬಹಳ ವ್ಯತ್ಯಾಸವಿದೆ. ಪಟ್ಟಣದಲ್ಲಿ 79 ಸಾವಿರದ ಮೇಲೆ ಜನಸಂಖ್ಯೆಯಿದೆ ಎಂದು ಶಾಸಕ ಎಂ.ಸಿ ಮನಗೂಳಿ ಹೇಳಿದ್ರು. ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮಾತ್ನಾಡಿದ ಅವರು, ನಮ್ಮ ಅಭಿವೃದ್ಧಿ ಕೆಲಸಗಳು ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಕಾರಣವಾಗುತ್ತೆ ಅಂತಾ ಅಭಿಪ್ರಾಯಪಟ್ಟರು.

ಪಟ್ಟಣದ ಅಭಿವೃದ್ಧಿ ಕಾರ್ಯದಲ್ಲಿ ಸಾಕಷ್ಟು ಕೆಲಸಗಳನ್ನ ಮಾಡಿದ್ದೇನೆ. ನೀರು, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆಧ್ಯತೆ ನೀಡಿದ್ದೇನೆ. ಒಳಚರಂಡಿ ಕಾಮಗಾರಿಯನ್ನ ಚುನಾವಣೆ ನೀತಿ ಸಂಹಿತೆ ಮುಗಿದ್ಮೇಲೆ ಪ್ರಾರಂಭಿಸಲಾಗುವುದು ಅಂತಾ ತಿಳಿಸಿದ್ರು. ಇನ್ನು 3 ವರ್ಷ ಅವಧಿಯಿದ್ದು ಪಟ್ಟಣಕ್ಕೆ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡುವ ಮೂಲಕ ಆದರ್ಶ ಪಟ್ಟಣ ಮಾಡುತ್ತೇನೆ. ಈ ನಿಟ್ಟಿನಲ್ಲಿ 23 ವಾರ್ಡ್ ಗಳಿಗೆ ಗೆಲ್ಲುವ ಸಾಮರ್ಥ್ಯವಿರುವ, ಹೆಸರುಗಳಿಸಿರುವ ಸೂಕ್ತ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತೇವೆ. ಇದಕ್ಕಾಗಿ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಅಂತಾ ಹೇಳಿದ್ರು.

ತಾಲೂಕಾ ಅಧ್ಯಕ್ಷ ನಿಂಗಣ್ಣ ಬಿರಾದಾರ, ಶಿವಪ್ಪಗೌಡ ಬಿರಾದಾರ, ಜೆಡಿಎಸ್ ಯುವ ಮುಖಂಡ ಅಶೋಕ ಮನಗೂಳಿ, ಶಿವಾನಂದ ಹರನಾಳ, ಇಸ್ಮಾಯಿಲ ಖೇಡ, ಪ್ರಕಾಶ ಹಿರೇಕುರುಬರ, ಮಂಜುನಾಥ ಬಿಜಾಪುರ, ಪರುಶುರಾಮ ಕಾಂಬ್ಳೆ, ಶೈಲಜಾ ಸ್ಥಾವರಮಠ, ಸೇರಿದಂತೆ ಅನೇಕರು ಉಪಸ್ಥಿತರಿದ್ರು. ಸಲೀಂ ಜುಮನಾಳ ನಿರೂಪಿಸಿದ್ರು. ರಾಜಶೇಖರ ಕುಚಬಾಳ ವಂದಿಸಿದ್ರು.




Leave a Reply

Your email address will not be published. Required fields are marked *

error: Content is protected !!