ಕೃಷಿ ಮೇಳಕ್ಕೆ ಪ್ರವಾಹದ ಎಫೆಕ್ಟ್!

398

ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಇಂದಿನಿಂದ ಕೃಷಿ ಮೇಳ ಶುರುವಾಗಿದೆ. ರಾಜ್ಯ ಹಾಗೂ ವಿವಿಧ ರಾಜ್ಯಗಳಿಂದ ರೈತರಿಗೆ ಸಂಬಂಧಿಸಿದ ಉಪಕರಣಗಳು, ವಿವಿಧ ತಳಿಗಳ ಬೀಜಗಳು, ಸಸಿಗಳು, ಮಾದರಿ ಸಾಮಗ್ರಿಗಳು, ಜಾನುವಾರುಗಳು ಸೇರಿದಂತೆ ವಿವಿಧ ಆಕರ್ಷಣೆಯಿಂದ ಸಮ್ಮೇಳನ ನೋಡಗರನ್ನ ಸೆಳೆಯುತ್ತಿದೆ.

ಲಕ್ಷಾಂತರ ಜನರು ಕೃಷಿ ಮೇಳಕ್ಕೆ ಆಗಮಿಸ್ತಿದ್ದು ಎರಡು ದಿನಗಳ ಕಾಲ ಭರ್ಜರಿಯಾಗಿ ಕಾಲ ಕಳೆಯಲಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಿಂದ ಸೇರಿದಂತೆ ಮಾದರಿ ರೈತರು ಆಗಮಿಸಿ ತಮ್ಮ ಅಭಿಪ್ರಾಯಗಳನ್ನ ಹಂಚಿಕೊಳ್ತಿದ್ದಾರೆ. ಆದ್ರೆ, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗಹಿಸಿಲ್ಲ ಎನ್ನಲಾಗ್ತಿದೆ. ಈ ಬಾರಿ ಪ್ರವಾಹದ ಎಫೆಕ್ಟ್ ಮೇಳದ ಮೇಲಾಗ್ತಿದೆ ಎನ್ನಲಾಗ್ತಿದೆ.

ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ ಭಾಗದ ತುಂಬಾ ಪ್ರವಾಹ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ. ಇದ್ರಿಂದಾಗಿ ಲಕ್ಷಾಂತರ ಹೆಕ್ಟರ್ ಜಮೀನು ಹಾಳಾಗಿದೆ. ಇದ್ರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸಿಲ್ಲ ಅನ್ನೋದು ಕಂಡು ಬರ್ತಿದೆ. ಇವತ್ತು ಮೊದಲ ದಿನವಾಗಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆಯಿದೆ ಅಂತಾ ಸಹ ಹೇಳಲಾಗ್ತಿದ್ದು, ನಾಳೆ ಇದರ ಸ್ಪಷ್ಟ ಚಿತ್ರಣ ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!