ಬಿಟೌನ್ ಹಿರಿಯ ನಟ ರಿಶಿ ಕಪೂರ್ ನಿಧನ

346

ನಿನ್ನೆಯಷ್ಟೇ ನಟ ಇರ್ಫಾನ ಖಾನ್ ಸಾವು ಬಾಲಿವುಡ್ ಸೇರಿ ದೇಶದ ಜನತೆಗೆ ಶಾಕ್ ಆಗಿತ್ತು. ಹೀಗಿರುವಾಗ ಇದೀಗ ಹಿರಿಯ ನಟ ರಿಶಿ ಕಪೂರ್ ನಿಧನರಾಗಿದ್ದಾರೆ. 67 ವರ್ಷದ ಹಿರಿಯ ನಟ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಳೆದೆರಡು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು, ಕಳೆದ ವರ್ಷ ಅಮೆರಿಕದಲ್ಲಿ ಚಿಕಿತ್ಸೆ ಪಡೆದಿದ್ರು. ನಿನ್ನೆ ಅವರ ಆರೋಗ್ಯದಲ್ಲಿ ಏರುಪೇರಾಗಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರು ನಿಧನರಾಗಿದ್ದಾರೆ.

ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ರಿಶಿ, ನಟ, ನಿರ್ದೇಶಕ, ನಿರ್ಮಾಪಕನಾಗಿಯೂ ಕೆಲಸ ಮಾಡಿದ್ದಾರೆ. ಮೇರಾ ನಾಮ್ ಜೋಕರ್, ನಾಗಿನ್, ಹನಿಮೂನ್, ಬಾಬಿ, ದಿವಾನ್, ಚಾಂದಿನಿ, ಸಾಗರ್ ಸೇರಿದಂತೆ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನ ನೀಡಿದ್ದಾರೆ. ಪತ್ನಿ ನಿತೂ ಸಿಂಗ್, ನಟ ರಣಬೀರ ಕಪೂರ್ ಸೇರಿದಂತೆ ಇಬ್ಬರು ಮಕ್ಕಳನ್ನ ಅಗಲಿದಿದ್ದಾರೆ.

ಬಿಟೌನ್ ಅಂಗಳದ ಕಪೂರ್ ಮನೆತನದ ಮತ್ತೊಂದು ಕುಡಿ ಕಣ್ಮರೆಯಾಗಿದೆ. ರಿಶಿ ಕಪೂರ್ ನಿಧನಕ್ಕೆ ಚಿತ್ರರಂಗದ ದಿಗ್ಗಜರೆಲ್ಲ ಸಂತಾಪ ಸೂಚಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!