47 ಸಾವಿರಕ್ಕೂ ಹೆಚ್ಚು ವಾಹನ ಸೀಜ್: ಪೊಲೀಸ್ ಆಯುಕ್ತರು ಟ್ವೀಟ್

333

ಬೆಂಗಳೂರು: ಲಾಕ್ ಡೌನ್ ಉಲ್ಲಂಘನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ರು ಇದುವರೆಗೂ 47 ಸಾವಿರಕ್ಕೂ ಹೆಚ್ಚು ವಾಹನಗಳನ್ನ ಸೀಜ್ ಮಾಡಿದ್ದಾರೆ. ಇವುಗಳನ್ನ ಮರಳಿ ಕೊಡುವ ಬಗ್ಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಟ್ವೀಟ್ ಮಾಡಿದ್ದಾರೆ.

ಮೇ 1 ರಿಂದ ವಾಹನಗಳನ್ನ ಮಾಲೀಕರಿಗೆ ಮರಳಿ ಕೊಡುವ ನಿರ್ಧಾರ ಮಾಡಲಾಗಿದೆ. ಮೊದಲು ಸೀಜ್ ಆದ ಗಾಡಿಗಳನ್ನ, ದಾಖಲೆಗಳನ್ನ ಪರಿಶೀಲನೆ ಮಾಡಿ ನೀಡಲಾಗುತ್ತೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

https://twitter.com/deepolice12/status/1255695880042110976?s=20

ವಶಪಡಿಸಿಕೊಂಡಿರುವ ವಾಹನಗಳನ್ನ ಮಾಲೀಕರಿಗೆ ನೀಡಲು ಸಿಎಂ ಹಾಗೂ ಗೃಹ ಸಚಿವರು ಅನುಮೋದನೆ ನೀಡಿದ್ದು, ನಾಳೆಯಿಂದ ಮಾಲೀಕರಿಗೆ ಅವರ ವಾಹನ ನೀಡಲಾಗುವುದು ಎಂದಿದ್ದಾರೆ. 44,081 ಬೈಕ್ ಹಾಗೂ 1,168 ಆಟೋಗಳು ಸೇರಿ 47, 258 ವಾಹನಗಳನ್ನ ಸೀಜ್ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!