ರಿಶಿ ಅಂತಿಮ ಸಂಸ್ಕಾರದ ವಿಡಿಯೋ ಮಾಡಿದ ಆಲಿಯಾ: ವಿಷ್ಯ ತಿಳಿಯದೆ ಟ್ರೋಲ್ ಮಾಡಿದ್ರು

344

ಬಾಲಿವುಡ್ ಅಂಗಳದ ಸೂಪರ್ ಸ್ಟಾರ್ ನಟ ರಿಶಿ ಕಪೂರ್ ಏಪ್ರಿಲ್ 30ರಂದು ನಿಧನ ಹೊಂದಿದ್ರು. ಅಂದು ಅವರ ಅಂತಿಮ ವಿಧಿ ವಿಧಾನದ ವೇಳೆ, ನಟಿ ಆಲಿಯಾ ಭಟ್ ಮೊಬೈಲ್ ಫೋನ್ ಬಳಕೆ ಮಾಡಿರುವುದು ಭರ್ಜರಿಯಾಗಿ ಟ್ರೋಲ್ ಮಾಡಲಾಗ್ತಿದೆ. ಕೆಲವರು ಆಲಿಯಾಗೆ ಗಂಭೀರತೆಯಿಲ್ಲವೆಂದು ಮಾತ್ನಾಡಿದ್ದಾರೆ. ಆದ್ರೆ, ಅಸಲಿ ಕಾರಣ ಬೇರೆಯಿದೆ.

ಲಾಕ್ ಡೌನ್ ನಿಂದಾಗಿ ರಿಶಿ ಕಪೂರ್ ಮಗಳು ರಿಧಿಮಾ ಕಪೂರ್ ದೆಹಲಿಯಿಂದ ಬರಲು ಆಗಿರ್ಲಿಲ್ಲ. ಹೀಗಾಗಿ ನಟಿ ಆಲಿಯಾ ಭಟ್ ವಿಡಿಯೋ ಕಾಲ್ ಮಾಡಿ ಅವರಿಗೆ ತಂದೆಯ ಅಂತಿಮ ವಿಧಿ ವಿಧಾನ ನೋಡುವಂತೆ ಮಾಡಿದ್ರು. ರಿಶಿ ಹೆಂಡ್ತಿ ನೀತು, ಮಗ ರಣಬೀರ ಸಹ ಅಲ್ಲೆ ಇದ್ದು ದುಖಃದಲ್ಲಿರುವುದು ಕಂಡು ಬಂದಿದೆ. ಹೀಗೊಂದು ಒಳ್ಳೆಯ ಕೆಲಸ ಮಾಡಿದ್ರೂ, ಅದನ್ನ ತಿಳಿಯದೆ ಕೆಲವರು ಟ್ರೋಲ್ ಮಾಡ್ತಿದ್ದಾರೆ.

ಇನ್ನು ನಟ ರಣಬೀರ ಕಪೂರ್ ಹಾಗೂ ಆಲಿಯಾ ಭಟ್ ನಡುವೆ ಲವ್ವಿಡವ್ವಿ ಇದ್ದು, ಮದ್ವೆ ತಯಾರಿಯಲ್ಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!