ವಿಜಯಪುರದಲ್ಲಿ ಅಮಾನವೀಯ ಘಟನೆ

446

ವಿಜಯಪುರ: ಜಗತ್ತು ಎಷ್ಟೊಂದು ಆಧುನಿಕವಾಗಿ ಮುಂದುವರೆಯುತ್ತಿದೆ. ಹೆಣ್ಣು, ಗಂಡು ಅನ್ನೋ ಬೇಧಭಾವ ಇಲ್ಲದೆ ಸಾಗುತ್ತಿರುವ ಕಾಲವಿದು. ಆದ್ರೇನು ಮಾಡುವುದು? ನಮ್ಮಲ್ಲಿ ಇನ್ನು ಹೆಣ್ಮಕ್ಕಳು ಬೇಡವಾಗಿದೆ. ಹೀಗಾಗಿ ಹೆಣ್ಣು ಅನ್ನೋ ಕಾರಣಕ್ಕೆ, ಶಿಶುವೊಂದು ಎಸೆದು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ.

ವಿಜಯಪುರ ನಗರದ ಜಲನಗರದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಕಳೆದ ರಾತ್ರಿ ಹೆಣ್ಣು ಶಿಶು ಎಸೆದು ಹೋಗಿದ್ದು ಸ್ಥಳದಲ್ಲೆ ಅಸುನೀಗಿದೆ. ಈ ವಿಷ್ಯ ತಡವಾಗಿ ಬೆಳಕಿಗೆ ಬಂದಿದೆ. ನವಜಾತ ಶಿಶುವಿನ ಕಳೆಬರ ಕಂಡ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಈ ಕುರಿತು ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!