ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಡೀಪ್ ಫೇಕ್ ವಿಡಿಯೋ ಪೆಡಂಭೂತ ಇದೀಗ ಎಲ್ಲರನ್ನು ಬೆಚ್ಚಿಬೀಳಿಸುತ್ತಿದೆ. ಅದರಲ್ಲೂ ಹೆಣ್ಮಕ್ಕಳ ಬದುಕಿನಲ್ಲಿ ಅತ್ಯಂತ ನೋವಿನ ಸಂಗತಿಯಾಗಿ ಕಾಡುತ್ತಿದೆ. ನಟಿಯರಾದ ಕಾಜೋಲ್, ಕತ್ರೀನಾ ಕೈಫ್, ರಷ್ಮಿಕಾ ಮಂದಣ್ಣ ಬಳಿಕ ಇದೀಗ ನಟಿ ಆಲಿಯಾ ಭಟ್ ಗೂ ಡೀಪ್ ಫೇಕ್ ವಿಡಿಯೋ ಬಿಸಿ ತಟ್ಟಿದೆ.
ಯುವತಿಯೊಬ್ಬಳು ಬೆಡ್ ಮೇಲೆ ಕುಳಿತುಕೊಂಡು ಅಶ್ಲೀಲವಾಗಿ ವರ್ತಿಸುತ್ತಿರುವ ವಿಡಿಯೋದೊಂದಿಗೆ ಆಲಿಯಾ ಭಟ್ ಡೀಪ್ ಫೇಕ್ ವಿಡಿಯೋ ಮಾಡಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮದ ಜೊತೆಗೆ ಶಿಕ್ಷೆ, ದಂಡ ವಿಧಿಸಲು ಮುಂದಾಗಿದೆ. ಇದರ ನಡುವೆಯೂ ಡೀಪ್ ಫೇಕ್ ವಿಡಿಯೋ ತನ್ನ ಆಟ ಮುಂದುವರೆಸಿದೆ.