ದ್ವೇಷದ ವಿರುದ್ಧ ಬಾಲಿವುಡ್ ಧ್ವನಿ ಎತ್ತಬೇಕು ಎಂದು ಶಿವಸೇನೆ ಸಂಸದೆ

183

ಪ್ರಜಾಸ್ತ್ರ ಸುದ್ದಿ

ಮುಂಬೈ: ಇತ್ತೀಚೆಗೆ ಬಾಲಿವುಡ್ ನಟ, ನಟಿಯರು ವಿರುದ್ಧ ಬಾಯ್ ಕಟ್ ಹಾವಳಿ ಜೋರಾಗುತ್ತಿದೆ. ಬಲಪಂಥೀಯ ಸಂಘಟನೆಗಳು, ಹಿಂದೂಪರ ಸಂಘಟನೆಗಳು ಬಾಲಿವುಡ್ ಚಿತ್ರಗಳ ವಿರುದ್ಧ, ನಟ, ನಟಿಯರು ವಿರುದ್ಧ ದ್ವೇಷ ಹಾಗೂ ಭೀತಿಯ ರಾಜಕಾರಣ ಮಾಡುತ್ತಿವೆ. ಇದರ ವಿರುದ್ಧ ಧ್ವನಿ ಎತ್ತಬೇಕು ಎಂದು ಶಿವಸೇನೆ ಸಂಸದೆ ಪ್ರಿಯಾಂಕಾ ಚರ್ತುವೇದಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮಧ್ಯಪ್ರದೇಶದ ಮಹಾಕಾಲ ದೇವಸ್ಥಾನಕ್ಕೆ ನಟ ರಣಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ದಂಪತಿಗೆ ಪ್ರವೇಶಸದಂತೆ ಭಜರಂಗದಳದ ಕಾರ್ಯಕರ್ತರು ತಡೆದಿರುವುದನ್ನು ಖಂಡಿಸಿದ್ದಾರೆ. ಪ್ರಧಾನಿ ಮೋದಿ ಜೊತೆಗೆ ತೆಗೆಸಿಕೊಂಡಿರುವ ಫೋಟೋದ ಜೊತೆಗೆ, ದ್ವೇಷಕ್ಕೆ ನೀವು ಮೂಕಪ್ರೇಕ್ಷಕರಾಗಿ ಉಳಿಯುವವರೆಗೂ ಇಂಥ ಫೋಟೋದಿಂದ ನಿಮಗೆ ಯಾವುದೇ ಪ್ರಯೋಜನವಿಲ್ಲ. ಅವರು ನಾಳೆ ನಿಮ್ಮತನಕ ಬರುತ್ತಾರೆ.

ರಾಜಕೀಯ ಮಾತನಾಡುವುದು ನಮ್ಮ ಕೆಲಸವಲ್ಲ ಅನ್ನೋದರಿಂದ ದೂರವಿರಿ. ರಾಜಕೀಯ ಪೂರ್ವಗ್ರಹ ಇಂತಹ ಕೀಳು ಮಟ್ಟಕ್ಕೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ. ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಘಟನೆ ಪ್ರತಿಭಟನೆಗೆ ಒಂದು ನಿದರ್ಶನ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!