ಫಿಲ್ಮ್ ಫೇರ್ ಪ್ರಶಸ್ತಿ: ಇವರೆ ಅತ್ಯುತ್ತಮ ನಟ, ನಟಿ

133

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಫಿಲ್ಮ್ ಫೇರ್ ಪ್ರಶಸ್ತಿಯ 68ನೇ ಕಾರ್ಯಕ್ರಮ ಮುಂಬೈನಲ್ಲಿ ನಡೆದಿದೆ. ಬದಾಯಿ ದೋ ಚಿತ್ರದ ನಟನೆಗಾಗಿ ನಟ ರಾಜಕುಮಾರ್ ರಾವ್ ಅತ್ಯುತ್ತಮ ನಟ, ಗಂಗೂಬಾಯಿ ಕಾಥಿಯಾವಾಡಿ ಚಿತ್ರದ ನಟನೆಗಾಗಿ ನಟಿ ಆಲಿಯಾ ಭಟ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

ಗಂಗೂಬಾಯಿ ಕಾಥಿಯಾವಾಡಿ ಚಿತ್ರ ಬರೋಬ್ಬರಿ 10 ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಂದಿದೆ. ಇನ್ನು ಬದಾಯಿ ದೋ ಚಿತ್ರ ಸಹ 5 ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ವಿಕ್ರಮ್ ವೇದಾ, ಬ್ರಹ್ಮಾಸ್ತ್ರ-ಶಿವ-1,  ಆಕ್ಷನ್ ಹಿರೋ, ಜುಂಡ್ ಸೇರಿ ಅನೇಕ ಚಿತ್ರಗಳಲ್ಲಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದುಕೊಂಡಿವೆ.




Leave a Reply

Your email address will not be published. Required fields are marked *

error: Content is protected !!