ಬ್ರೇಕಿಂಗ್ ನ್ಯೂಸ್: ಜೂ.14ರಿಂದ ಅಗತ್ಯ ಸೇವೆಗೆ ಮಧ್ಯಾಹ್ನ 2 ಗಂಟೆ ತನಕ ಅವಕಾಶ

341

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಾ ಬರ್ತಿದೆ. ಈ ಮೂಲಕ ರಾಜ್ಯದ ಜನರಿಗೆ ಖುಷಿಯಾಗ್ತಿದ್ದು, ರಾಜ್ಯ ಸರ್ಕಾರ ಸಹ ಲಾಕ್ ಡೌನ್ ತೆರವುಗೊಳಿಸುವ ಕುರಿತು ಚಿಂತನೆ ನಡೆಸಿತು. ಈ ಸಂಬಂಧ ಗುರುವಾರ ಸಂಜೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಸಲಾಯ್ತು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತ್ನಾಡಿದ್ರು.

ತಾಂತ್ರಿಕ ಸಲಹಾ ಸಮಿತಿಯ ಮೂಲಕ ಲಾಕ್ ಡೌನ್ ನಿಯಮಗಳಲ್ಲಿ ಒಂದಿಷ್ಟು ಸಡಿಲಿಕೆ ಮಾಡಲಾಗಿದೆ. ಆದ್ರೆ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ. ಬೆಂಗಳೂರು ಗ್ರಾಮಾಂತರ, ಮಂಡ್ಯ, ಬೆಳಗಾವಿ, ಕೊಡಗು ಜಿಲ್ಲೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲವೆಂದು ಹೇಳಿದ್ರು.

ಉಳಿದ ಜಿಲ್ಲೆಗಳಲ್ಲಿ ಜೂನ್ 14ರಿಂದ ಜೂನ್ 21ರ ತನಕ ಸಡಿಲಿಕೆ. ಎಲ್ಲ ಕಾರ್ಖಾನೆಗಳನ್ನ ಶೇಕಡ 50ರಷ್ಟು ಸಿಬ್ಬಂದಿಯೊಂದಿಗೆ ಅನುಮತಿ. ಗಾರ್ಮೆಂಟ್ಸ್ ಶೇಕಡ 30ರಷ್ಟು ಸಿಬ್ಬಂದಿ, ಅಗತ್ಯ ಅಂಗಡಿಗಳ ಸಮಯವನ್ನ ಮಧ್ಯಾಹ್ನ 2 ಗಂಟೆಯ ತನಕ ನೀಡಲಾಗಿದೆ. ನಿರ್ಮಾಣ ಚಟುವಟಿಕೆಗೆ ಅವಕಾಶ, ಪಾರ್ಕ್ ಬೆಳಗ್ಗೆ 5ರಿಂದ 10 ಗಂಟೆಯ ತನಕ ಅವಕಾಶ. ಬೀದಿ ಬದಿ ವ್ಯಾಪಾರಿಗಳಿಗೆ ಬೆಳಗ್ಗೆ 6ರಿಂದ 2 ಗಂಟೆಯ ತನಕ ಅವಕಾಶ.

ಆಟೋ, ಟ್ಯಾಕ್ಸಿಗಳಲ್ಲಿ 2 ಅವಕಾಶ. ಶುಕ್ರವಾರವಾರಿದಂದ ಸೋಮವಾರ ತನಕ ವಾರಂತ್ಯ ಕರ್ಫ್ಯೂ ಜಾರಿಯಲ್ಲಿರುತ್ತೆ. ಕೋವಿಡ್ ಸೋಂಕು ಇನ್ನಷ್ಟು ಇಳಿಕೆ ಕಂಡ್ರೆ ಇನ್ನಷ್ಟು ಸಡಿಲಿಕೆ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಸುದ್ದಿಗೋಷ್ಠಿಗೂ ಮೊದ್ಲು ನಡೆದ ಸಭೆಯಲ್ಲಿ ಡಿಸಿಎಂಗಳಾದ ಡಾ.ಅಶ್ವಥನಾರಾಯಣ, ಲಕ್ಷ್ಮಣ ಸವದಿ, ಸಚಿವರಾದ ಆರ್.ಅಶೋಕ, ಡಾ.ಸುಧಾಕರ.ಕೆ, ಜಗದೀಶ ಶೆಟ್ಟರ್, ಅರವಿಂದ ಲಿಂಬಾವಳಿ, ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ, ಬಿ.ಸಿ ಪಾಟೀಲ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!